ಅಮೆರಿಕ-ಇರಾನ್ ಸಂಘರ್ಷ ತಾರಕಕ್ಕೆ: ಟ್ರಂಪ್ ಭವಿಷ್ಯ

Update: 2018-07-13 17:39 GMT

ಬ್ರಸೆಲ್ಸ್ (ಬೆಲ್ಜಿಯಮ್), ಜು. 13: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಸ್ಫೋಟಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಈಗ ಅಮೆರಿಕವನ್ನು ಹೆಚ್ಚು ಗೌರವದಿಂದ ಕಾಣುತ್ತಿದೆ ಎಂಬುದಾಗಿಯೂ ಟ್ರಂಪ್ ಹೇಳಿಕೊಂಡಿದ್ದಾರೆ. ಇರಾನ್ ವಿಶ್ವದ ಬಲಿಷ್ಠ ದೇಶಗಳೊಂದಿಗೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದದಿಂದ ಅಮೆರಿಕ ಎರಡು ತಿಂಗಳ ಹಿಂದೆ ಹಿಂದೆಗೆದ ಬಳಿಕ, ಉಭಯ ದೇಶಗಳ ನಡುವಿನ ಸಂಘರ್ಷ ಸ್ಫೋಟಿಸಿದೆ. ಒಪ್ಪಂದದಿಂದ ಹಿಂದೆ ಬಂದ ತಕ್ಷಣ ಇರಾನ್ ಮೇಲೆ ಹೊಸದಾಗಿ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕದ ಟ್ರಂಪ್ ಆಡಳಿತ ಹೇರಿದೆ. ‘‘ಇದರ ಪರಿಣಾಮವಾಗಿ ಇರಾನ್ ಭಾರೀ ಸಂಕಷ್ಟಕ್ಕೆ ಒಳಗಾಗಿದೆ. ಒಂದು ಹಂತದಲ್ಲಿ ಇರಾನ್ ನನಗೆ ಫೋನ್ ಮಾಡುತ್ತದೆ ಹಾಗೂ ‘ನಾವೊಂದು ಒಪ್ಪಂದಕ್ಕೆ ಬರೋಣ’ ಎಂದು ಅವರು ಹೇಳುತ್ತಾರೆ. ಆಗ ನಾವು ಒಪ್ಪಂದ ಮಾಡುತ್ತೇವೆ’’ ಎಂದು ಬ್ರಸೆಲ್ಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News