ಸಿರಿಯ ಸ್ಥಿರತೆಗೆ ಯುಎಇ 342 ಕೋಟಿ ರೂ. ದೇಣಿಗೆ

Update: 2018-07-13 17:53 GMT

ಬ್ರಸೆಲ್ಸ್ (ಬೆಲ್ಜಿಯಮ್), ಜು. 13: ಸಿರಿಯದಲ್ಲಿ ಐಸಿಸ್ ಉಗ್ರರಿಂದ ಮರುವಶಪಡಿಸಿಕೊಳ್ಳಲಾದ ರಕ್ಕ ಮತ್ತು ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಸ್ಥಿರೀಕರಣ ಪ್ರಯತ್ನಗಳಿಗೆ ಬೆಂಬಲವಾಗಿ 50 ಮಿಲಿಯ ಡಾಲರ್ (ಸುಮಾರು 342 ಕೋಟಿ ರೂಪಾಯಿ) ನೀಡುವುದಾಗಿ ಯುಎಇ ಘೋಷಿಸಿದೆ.

ಬೆಲ್ಜಿಯಮ್ ರಾಜಧಾನಿ ಬ್ರಸೆಲ್ಸ್‌ನಲ್ಲಿ ನಡೆದ ಐಸಿಸ್ ವಿರುದ್ಧದ ಜಾಗತಿಕ ಮಿತ್ರಕೂಟದ ಸಭೆಯಲ್ಲಿ, ಯುಎಇ ರಕ್ಷಣಾ ವ್ಯವಹಾರಗಳ ಸಹಾಯಕ ಸಚಿವ ಮುಹಮ್ಮದ್ ಬಿನ್ ಅಹ್ಮದ್ ಅಲ್ ಬೊವಾರ್ದಿ ಈ ಘೋಷಣೆಯನ್ನು ಮಾಡಿದರು.

‘‘ಸಂತ್ರಸ್ತ ಪ್ರದೇಶಗಳ ವಾಸ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಮಿತ್ರಕೂಟದೊಂದಿಗೆ ನಿಕಟ ಸಮನ್ವಯ ಹೊಂದಿದ್ದೇವೆ’’ ಎಂದರು.

ಭಯೋತ್ಪಾದನೆಯ ಪಿಡುಗನ್ನು ನಿವಾರಿಸಲು, ಅದರ ಮೂಲಕಾರಣವನ್ನು ವಿಶ್ಲೇಷಿಸಲು ಹಾಗೂ ಅದರ ಹಣಕಾಸು ಮೂಲವನ್ನು ಕಡಿದುಹಾಕಲು ಜಗತ್ತಿನ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಾಯಕರ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವನ್ನು ಬೊವಾರ್ದಿ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News