ಪಾಕ್: ಚುನಾವಣಾ ಪ್ರಚಾರಗಳಲ್ಲಿ ಸ್ಫೋಟ; 90 ಸಾವು

Update: 2018-07-13 18:25 GMT

ಕ್ವೆಟ್ಟಾ (ಪಾಕಿಸ್ತಾನ), ಜು. 13: ಪಾಕಿಸ್ತಾನದಲ್ಲಿ ಶುಕ್ರವಾರ ಎರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 90 ಮಂದಿ ಮೃತಪಟ್ಟಿದ್ದಾರೆ ಹಾಗೂ 180 ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟ್ಟಾ ಸಮೀಪದ ಮಸ್ಟುಂಗ್ ಪಟ್ಟಣದಲ್ಲಿ ನಡೆದ ಸ್ಫೋಟದಲ್ಲಿ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಭೀತಿಯನ್ನು ಪ್ರಾಂತೀಯ ಗೃಹ ಸಚಿವ ಅಘಾ ಉಮರ್ ಬುಂಗಲ್‌ಝಾಯ್ ವ್ಯಕ್ತಪಡಿಸಿದರು.

ಬಲೂಚಿಸ್ತಾನ್ ಅವಾಮಿ ಪಾರ್ಟಿಯಿಂದ ಪ್ರಾಂತೀಯ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದ ಅಭ್ಯರ್ಥಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಕೆಲವು ಗಂಟೆಗಳ ಮೊದಲು, ವಾಯುವ್ಯ ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿ ಸಮೀಪದ ಬನ್ನು ಎಂಬ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಮೆರವಣಿಗೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಮುತ್ತಹಿದಾ ಮಜ್ಲಿಸೆ ಅಮಲ್ (ಎಂಎಂಎ) ಪಕ್ಷದ ಅಭ್ಯರ್ಥಿ ಅಪಾಯದಿಂದ ಪಾರಾಗಿದ್ದಾರೆ. ಪಾಕಿಸ್ತಾನದಲ್ಲಿ ಜುಲೈ 25ರಂದು ಸಂಸತ್ತು ಮತ್ತು ಪ್ರಾಂತೀಯ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News