ಎರಡನೇ ಏಕದಿನ: ಭಾರತಕ್ಕೆ ಹೀನಾಯ ಸೋಲು

Update: 2018-07-14 18:09 GMT

ಲಂಡನ್, ಜು.14: ಶತಕ ಸಿಡಿಸಿದ ಜೋ ರೂಟ್ (113) ಹಾಗೂ ಪ್ಲಂಕೆಟ್(4-46) ಉತ್ತಮ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು 86 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

 ಶನಿವಾರ ಇಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಭಾರತ 50 ಓವರ್‌ಗಳಲ್ಲಿ 236 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ 3 ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲ ಗೊಳಿಸಿದೆ.

ಭಾರತದ ಪರ ಸುರೇಶ್ ರೈನಾ(46),ನಾಯಕ ವಿರಾಟ್ ಕೊಹ್ಲಿ(45),ಎಂಎಸ್ ಧೋನಿ(37),ಶಿಖರ್ ಧವನ್(36) ಹಾಗೂ ಹಾರ್ದಿಕ್ ಪಾಂಡ್ಯ(21) ಎರಡಂಕೆಯ ಸ್ಕೋರ್ ಗಳಿಸಿದರು.

ಇಂಗ್ಲೆಂಡ್‌ನ ಪರ ಪ್ಲಂಕೆಟ್(4-46) ಯಶಸ್ವಿ ಬೌಲರ್ ಎನಿಸಿಕೊಂಡರು. ಡೇವಿಡ್ ವಿಲ್ಲಿ(2-48) ಹಾಗೂ ಆದಿಲ್ ರಶೀದ್(2-38) ತಲಾ ಎರಡು ವಿಕೆಟ್ ಪಡೆದರು. ಇದಕ್ಕೆ ಮೊದಲು ನಾಯಕ ಇಯಾನ್ ಮೊರ್ಗನ್(53)ಹಾಗೂ ಡೇವಿಡ್ ವಿಲ್ಲಿ(ಔಟಾಗದೆ 50) ಅರ್ಧಶತಕದ ಬೆಂಬಲದಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ 323 ರನ್ ಕಠಿಣ ಗುರಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News