ಥಾಯ್ಲೆಂಡ್ ಬ್ಯಾಡ್ಮಿಂಟನ್ ಓಪನ್: ಸಿಂಧುಗೆ ಎರಡನೇ ಸ್ಥಾನ

Update: 2018-07-15 12:01 GMT

ಬ್ಯಾಂಕಾಕ್, ಜು.15: ಥಾಯ್ಲೆಂಡ್ ಬ್ಯಾಡ್ಮಿಂಟನ್ ಓಪನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ನೊರೊಮಿ ಒಕುಹರಾಗೆ ಶರಣಾಗಿರುವ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡರು.

ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಒಕುಹರಾ ವಿರುದ್ಧ 15-21, 18-21 ಗೇಮ್‌ಗಳಿಂದ ಸೋತಿದ್ದಾರೆ. ಎರಡನೇ ಗೇಮ್‌ನಲ್ಲಿ ಕೆಲವೇ ನಿಮಿಷ ಪ್ರತಿರೋಧ ಒಡ್ಡಿದ್ದ ಸಿಂಧು ಸುಲಭವಾಗಿ ಸೋತಿದ್ದಾರೆ.

ಸಿಂಧು ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಇಂಡೋನೇಶ್ಯಾದ ಗ್ರೆಗೊರಿಯ ಮರಿಸ್ಕಾ ಅವರನ್ನು ಮೂರು ಗೇಮ್‌ಗಳ ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News