21ನೆ ಆವೃತ್ತಿಯ ಫಿಫಾ ವಿಶ್ವಕಪ್ ಗೆದ್ದ ಫ್ರಾನ್ಸ್

Update: 2018-07-15 17:00 GMT

ಮಾಸ್ಕೋ, ಜು.15: ಇಪ್ಪತ್ತೊಂದನೆ ಆವೃತ್ತಿಯ ಫಿಫಾ ವಿಶ್ವಕಪ್ ಅನ್ನು ಕ್ರೊಯೇಶಿಯಾವನ್ನು ಮಣಿಸಿದ ಫ್ರಾನ್ಸ್ ಗೆದ್ದುಕೊಂಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ 4-2 ಗೋಲುಗಳಿಂದ ಕ್ರೊಯೇಶಿಯಾವನ್ನು ಫ್ರಾನ್ಸ್ ಮಣಿಸಿತು. ಫ್ರಾನ್ಸ್ ಎರಡನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಲುಝ್ನಿಕಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ಇದರೊಂದಿಗೆ ಮೊದಲ ಬಾರಿ ಫೈನಲ್ ಪ್ರವೇಶಿಸಿ ವಿಶ್ವಕಪ್ ಎತ್ತುವ ಕ್ರೊಯೇಶಿಯದ ಪ್ರಯತ್ನ ವಿಫಲಗೊಂಡಿತು.

ಫ್ರಾನ್ಸ್ ಪರ ಆ್ಯಂಟೊನಿ ಗ್ರೀಝ್ಮ್ಯಾನ್, ಪೌಲ್ ಪೋಗ್ಬಾ, ಕೈಲ್ಯಾನ್ ಬಾಪೆ  ಗೋಲು ಗಳಿಸಿದರೆ, ಕ್ರೊಯೇಶಿಯಾ ಆಟಗಾರ ಮರಿಯೋ ಮ್ಯಾಂಝುಕಿಕ್ ಸ್ವಯಂ ಗೋಲು ಗಳಿಸಿದರು. 

1998ರಲ್ಲಿ ಮೊದಲ ಬಾರಿ ವಿಶ್ವಕಪ್ ಜಯಿಸಿದ್ದ ಫ್ರಾನ್ಸ್ ಇದೀಗ 20 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಬಾಚಿಕೊಂಡಿತು. 2006ರಲ್ಲಿ ಇಟಲಿ ವಿರುದ್ಧ ಸೋತು ಫ್ರಾನ್ಸ್ ಎರಡನೇ ಸ್ಥಾನ ಪಡೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News