ನೂತನ ಎನ್‌ಇಇಟಿ ಮಾದರಿ ಶಿಕ್ಷಣದ ಇನ್ನಷ್ಟು ಖಾಸಗೀಕರಣದ ಪ್ರಯತ್ನ: ತಜ್ಞರು

Update: 2018-07-15 17:12 GMT

ಚೆನ್ನೈ, ಜು. 15: ಎನ್‌ಇಇಟಿ ಹಾಗೂ ಐಐಟಿ-ಜೆಇಇಯನ್ನು ವರ್ಷಕ್ಕೆ ಎರಡು ಬಾರಿ ಸಂಪೂರ್ಣವಾಗಿ ಕಂಪ್ಯೂಟರೀಕೃತ ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಕಳೆದ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಆದಾಗ್ಯೂ, ನೂತನ ಮಾದರಿ ಶಿಕ್ಷಣವನ್ನು ಇನ್ನಷ್ಟು ಖಾಸಗೀಕರಿಸುವ ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯ ಅಪಮೌಲ್ಯಗೊಳಿಸುವ ಪ್ರಯತ್ನ ಇದು ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

ಜೆಇಇ (ಮುಖ್ಯ) ಹಾಗೂ ಎನ್‌ಇಇಟಿಯನ್ನು ವರ್ಷಕ್ಕೆ ಒಂದು ಬಾರಿ ನಡೆಸಲಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಜೆಇಇಯನ್ನು ಜನವರಿ ಹಾಗೂ ಎಪ್ರಿಲ್‌ನಲ್ಲಿ ಹಾಗೂ ಎನ್‌ಇಇಟಿಯನ್ನು ಫೆಬ್ರವರಿ ಹಾಗೂ ಮೇಯಲ್ಲಿ ಬರೆಯಬಹುದು. ಈ ಎರಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಪರೀಕ್ಷೆಯ ಅಂಕಗಳನ್ನು ಸೈಕೊಮೆಟ್ರಿಕ್ ವಿಧಾನ, ಪ್ರಮಾಣೀಕೃತ ತಂತ್ರದ ಮೂಲಕ ಹೋಲಿಕೆ ಮಾಡಿ ನೋಡಲಾಗುತ್ತದೆ. ಈ ಹೋಲಿಕೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪರೀಕ್ಷೆಯನ್ನು ದಾಖಲಾತಿಗೆ ಪರಿಗಣಿಸಲಾಗುತ್ತದೆ. ಈ ವಿಧಾನ ಪರೀಕ್ಷೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ಸುಧಾರಿಸುತ್ತದೆ ಎನ್ನಲಾಗಿದೆ.

 ಈ ನಿರ್ಧಾರದಿಂದ ಅಂಕ ಸುಧಾರಣೆಗೆ ಇನ್ನೊಂದು ಪರೀಕ್ಷೆ ಎದುರಿಸಲು ಅಭ್ಯರ್ಥಿಗಳು ಹೆಚ್ಚು ಸಮಯ ಕಾಯಬೇಕೆಂದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಂದರ್ಭದಲ್ಲೇ ಅಥವಾ ಕಾಲೇಜು ಪ್ರವೇಶ ಪಡೆದ ಬಳಿಕ ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News