300 ಕೋಟಿ ರೂ. ಸ್ವಿಸ್ ಠೇವಣಿಗೆ ವಾರೀಸುದಾರರಿಲ್ಲ?

Update: 2018-07-15 17:53 GMT

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಜು. 15: ಭಾರತೀಯರ ಸುಮಾರು 300 ಕೋಟಿ ರೂಪಾಯಿ ಮೊತ್ತ ಸ್ವಿಟ್ಸರ್‌ಲ್ಯಾಂಡ್‌ನ ಬ್ಯಾಂಕ್‌ಗಳಲ್ಲಿ ವಾರೀಸುದಾರರಿಲ್ಲದೆ ನಿಷ್ಕ್ರಿಯವಾಗಿದೆ.

ಮಾಲೀಕರಿಲ್ಲದೆ ಅಥವಾ ವಾರೀಸುದಾರರು ಮುಂದೆ ಬಾರದೆ ಇರುವ ಖಾತೆಗಳ ವಿವರಗಳನ್ನು ಮೂರು ವರ್ಷಗಳಿಂದ ಸ್ವಿಸ್ ಬ್ಯಾಂಕ್‌ಗಳು ಬಹಿರಂಗಪಡಿಸುತ್ತಾ ಬಂದಿವೆ.

ಖಾತೆಗಳ ನಿಜವಾದ ಮಾಲೀಕರು ಅಥವಾ ಅವರ ಅಧಿಕೃತ ವಾರೀಸುದಾರರಿಗೆ ತಿಳಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ.

ಈ ಬಾರಿ ಸ್ವಿಸ್ ಬ್ಯಾಂಕ್‌ಗಳ ಒಕ್ಕೂಟವು ಸ್ವಿಟ್ಸರ್‌ಲ್ಯಾಂಡ್ ಮತ್ತು ವಿದೇಶಿಯರ ನಿಷ್ಕ್ರಿಯವಾಗಿರುವ ಠೇವಣಿಗಳಿಗೆ ಸಂಬಂಧಿಸಿದ 3,500 ಖಾತೆಗಳನ್ನು ಪಟ್ಟಿ ಮಾಡಿ ಪ್ರಕಟಿಸಿದೆ. ಇದರಲ್ಲಿ ಕನಿಷ್ಠ 6 ಖಾತೆಗಳು ಭಾರತದೊಂದಿಗೆ ನಂಟು ಹೊಂದಿವೆ. 2015ರಿಂದಲೂ ಈ ಖಾತೆಗಳು ನಿಷ್ಕ್ರಿಯವಾಗಿಯೇ ಮುಂದುವರಿದಿವೆ. ಅವುಗಳ ಮಾಲೀಕರಾಗಲಿ ಅಥವಾ ವಾರೀಸುದಾರರಾಗಲಿ ಹಣ ಪಡೆಯಲು ಮುಂದೆ ಹೋಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News