ಮಹಾರಾಷ್ಟ್ರ: 11 ತಿಂಗಳಲ್ಲಿ 13,500 ಮಕ್ಕಳ ಸಾವು

Update: 2018-07-16 18:39 GMT

ನಾಗಪುರ, ಜು. 16: ಕಡಿಮೆ ತೂಕ, ನ್ಯುಮೋನಿಯಾ, ಶ್ವಾಸೋಚ್ಛಾಸದ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ಕಾರಣಗಳಿಂದ ಮಹಾರಾಷ್ಟ್ರದಲ್ಲಿ ಎಪ್ರಿಲ್ 2017ರಿಂದ ಫೆಬ್ರವರಿ 2018ರ ನಡುವೆ 13,500ಕ್ಕೂ ಅಧಿಕ ಮಕ್ಕಳು ಮೃತಪಟ್ಟಿವೆ ಎಂದು ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಲಾಯಿತು. ಈ ಅವಧಿಯಲ್ಲಿ ಒಟ್ಟು 13,541 ಮಕ್ಕಳು ಮೃತಪಟ್ಟಿವೆ. ಶೇ. 22 ಮಕ್ಕಳು ಕಡಿಮೆ ತೂಕದ ಕಾರಣಕ್ಕೆ ಮೃತಪಟ್ಟಿವೆ ಎಂದು ಆರೋಗ್ಯ ಸಚಿವ ದೀಪಕ್ ಸಾವಂತ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯುಮೋನಿಯಾ ಹಾಗೂ ಸೂಕ್ಷ್ಮಾಣು ಸೋಂಕಿನಿಂದ ಶೇ. 7 ಮಕ್ಕಳು, ಶ್ವಾಸೋಚ್ವಾಸ ಸಂಬಂಧಿತ ಸಮಸ್ಯೆಯಿಂದ ಶೇ. 14 ಮಕ್ಕಳು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News