ಜುಲೈ 19ರಂದು ಲೋಕಪಾಲ್ ಆಯ್ಕೆ ಸಮಿತಿಯ ಸಭೆ : ಕೇಂದ್ರ ಸರಕಾರ

Update: 2018-07-17 18:36 GMT

ಹೊಸದಿಲ್ಲಿ, ಜು.17: ಶೋಧನಾ ತಂಡವನ್ನು ರಚಿಸುವ ಉದ್ದೇಶದಿಂದ ಲೋಕಪಾಲ್ ಆಯ್ಕೆ ಸಮಿತಿಯು ಜುಲೈ 19ರಂದು ಸಭೆ ನಡೆಸಲಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಶೋಧನಾ ತಂಡವು ಲೋಕಪಾಲರನ್ನಾಗಿ ಆಯ್ಕೆ ಮಾಡಲು ಅಭ್ಯರ್ಥಿಗಳ ಪಟ್ಟಿಯನ್ನು ಶಿಫಾರಸು ಮಾಡಲಿದೆ ಎಂದು ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್‌ನ ನ್ಯಾಯಪೀಠಕ್ಕೆ ಕೇಂದ್ರ ಸರಕಾರ ತಿಳಿಸಿದೆ.

ಆಯ್ಕೆ ಸಮಿತಿಯು ಜುಲೈ 19ರಂದು ಸಭೆ ಸೇರಲಿರುವ ಕಾರಣ ಯಾವುದೇ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು. ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶರು, ಲೋಕಸಭಾ ಸ್ಪೀಕರ್, ಅತೀ ದೊಡ್ಡ ವಿರೋಧ ಪಕ್ಷದ ಮುಖಂಡ ಹಾಗೂ ಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಹೊಂದಿದೆ. ಕಳೆದ ವರ್ಷ ಸುಪ್ರೀಂಕೋರ್ಟ್ ಆದೇಶ ನೀಡಿದ ಹೊರತಾಗಿಯೂ ಲೋಕಪಾಲರನ್ನು ನೇಮಿಸದೆ ಕೇಂದ್ರ ಸರಕಾರ ನ್ಯಾಯಾಂಗ ನಿಂದನೆ ಎಸಗಿದೆ ಎಂದು ಎನ್‌ಜಿಒ ಸಂಸ್ಥೆಯೊಂದರ ಪರವಾಗಿ ಹಿರಿಯ ವಕೀಲ ಶಾಂತಿಭೂಷಣ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News