ಸಿರಿಯದಲ್ಲಿ ಅಮೆರಿಕ ಸೇನೆ ಜೊತೆಗಿನ ಸಹಕಾರ ವೃದ್ಧಿಗೆ ಸಿದ್ಧ: ರಶ್ಯ

Update: 2018-07-18 17:56 GMT

ಮಾಸ್ಕೋ, ಜು. 18: ಸಿರಿಯದಲ್ಲಿ ಅಮೆರಿಕ ಸೇನೆಯೊಂದಿಗಿನ ಸಹಕಾರವನ್ನು ಹೆಚ್ಚಿಸಲು ತಾನು ಸಿದ್ಧ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ಶೃಂಗ ಸಮ್ಮೇಳನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಟ್ರಂಪ್ ಮತ್ತು ಪುಟಿನ್ ನಡುವೆ ಏರ್ಪಟ್ಟ ಒಪ್ಪಂದಗಳ ಪ್ರಾಯೋಗಿಕ ಅನುಷ್ಠಾನಕ್ಕೆ ತಾನು ಸಿದ್ಧ ಎಂದು ಸಚಿವಾಲಯ ಮಂಗಳವಾರ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಸಿರಿಯದಲ್ಲಿ ಸಹಕಾರ’ಕ್ಕೆ ಸಂಬಂಧಿಸಿ ಅಮೆರಿಕ ಸೇನೆಯೊಂದಿಗಿನ ಸಂಪರ್ಕಗಳನ್ನು ವೃದ್ಧಿಸಲು ರಶ್ಯದ ಸೇನಾ ನಾಯಕತ್ವ ಸಿದ್ಧವಿದೆ ಎಂದು ಅದು ಹೇಳಿದೆ.

ಸೋಮವಾರ ನಡೆದ ಶೃಂಗ ಸಭೆಯಲ್ಲಿ ಸಿರಿಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ರಶ್ಯಗಳು ಒಮ್ಮತಕ್ಕೆ ಬಂದಿವೆ ಎಂಬುದಾಗಿ ಪುಟಿನ್ ಹೇಳಿದ್ದಾರೆ. ಆದರೆ, ವಿವರಗಳನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News