ನಿವೃತ್ತ ನ್ಯಾಯಮೂರ್ತಿ ನಿವಾಸದಿಂದ 100 ಪ್ರಕರಣಗಳ ಕಾಗದ ಪತ್ರ ನಾಪತ್ತೆ

Update: 2018-07-19 17:48 GMT

 ಹೊಸದಿಲ್ಲಿ, ಜು. 19: ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನಿವಾಸಕ್ಕೆ ಕಳುಹಿಸಿ ಕೊಡಲಾಗಿದ್ದ 100 ಪ್ರಕರಣಗಳ ಕಾಗದಪತ್ರಗಳು ನಾಪತ್ತೆಯಾಗಿವೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಬರ್ಮುಡಾ ಟ್ರೈಯಾಂಗಲ್‌ನಲ್ಲಿ ಹಡಗು ಕಾಣೆಯಾದಂತೆ 100 ಪ್ರಕರಣಗಳಿಗೆ ಸಂಬಂಧಿಸಿದ ಕಾಗದ ಪತ್ರಗಳು ನಾಪತ್ತೆಯಾಗಿರುವುದು ಕಳವಳಕಾರಿ ವಿಚಾರ ಎಂದು ಈ ಪ್ರಕರಣದ ಕುರಿತು ಬುಧವಾರ ಸಿಬಿಐ ತನಿಖೆಗೆ ಆದೇಶ ನೀಡಿರುವ ನ್ಯಾಯಮೂರ್ತಿ ಜಿ. ಜಯಚಂದ್ರನ್ ಹೇಳಿದ್ದಾರೆ. ಆಗ ನ್ಯಾಯಮೂರ್ತಿಯಾಗಿದ್ದ ಟಿ. ಮತಿವನನ್ ನಿವಾಸಕ್ಕೆ ನಿಗದಿತ ಅವಧಿಗೆ 100 ಪ್ರಕರಣಗಳ ಕಾಗದ ಪತ್ರಗಳನ್ನು ಕಳುಹಿಸಿ ಕೊಡಲಾಗಿತ್ತು. ಅದು ಅನಂತರ ನಾಪತ್ತೆಯಾಗಿತ್ತು.

ನಾಪತ್ತೆಯಾದ ಕಾಗದ ಪತ್ರಗಳನ್ನು ಪುನರ್ ರಚಿಸುವುದು ಆಡಳಿತಕ್ಕಿರುವ ಪರಿಹಾರ. ಆದರೆ, ನಿವೃತ್ತ ನ್ಯಾಯಾಧೀಶರ ನಿವಾಸದಿಂದ 100 ಪ್ರಕರಣಗಳ ಕಾಗದ ಪತ್ರಗಳು ನಾಪತ್ತೆಯಾಗಿರುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News