ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆಗೆ ಸಮ್ಮತಿ

Update: 2018-07-19 18:10 GMT

ಹೊಸದಿಲ್ಲಿ, ಜು.19: ಬ್ಯಾಂಕ್‌ಗಳಿಗೆ ಬೃಹತ್ ಮೊತ್ತದ ಸಾಲಗಳನ್ನು ಬಾಕಿಯಿಟ್ಟು ದೇಶ ತೊರೆದಿರುವ ವ್ಯಕ್ತಿಗಳನ್ನು ಮರಳಿ ಕರೆ ತರುವ ಸಲುವಾಗಿ ಪರಿಚಯಿಸಲಾಗಿರುವ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಗೆ ಬುಧವಾರ ಲೋಕಸಬೆಯಲ್ಲಿ ಸಮ್ಮತಿ ದೊರಕಿದೆ. ಈ ನೂತನ ಕಾಯ್ದೆಯು ಕಳೆದ ಎಪ್ರಿಲ್‌ನಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕಿದ್ದ ಅದೇ ಹೆಸರಿನ ಸುಗ್ರಿವಾಜ್ಞೆಯ ಬದಲಾಗಿ ಜಾರಿಗೆ ಬರಲಿದೆ.

ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧ ಸರಿಯಾದ ಕಾನೂನು ಕ್ರಮ ಜರುಗಿಸಲು ಯಾವುದೇ ಸೂಕ್ತ ಕಾನೂನು ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಂಥ ಒಂದು ಕಾನೂನು ರೂಪಿಸುವ ಅಗತ್ಯತೆ ಎದುರಾಯಿತು ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಪರಾರಿಯಾದ ಅಪರಾಧಿಗಳ ವಿರುದ್ಧ ಕಾನುನು ಪ್ರಕ್ರಿಯೆ ಸ್ಥಗಿತಗೊಳ್ಳದಿರಲಿ ಎಂಬ ಉದ್ದೇಶದಿಂದ ಈ ಹಿಂದೆ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News