ಶಿವಾಜಿ ಪ್ರತಿಮೆ ನಿರ್ಮಾಣ ಎನಿಸಿದಂತೆ ಸಾಧ್ಯವೇ?

Update: 2018-07-20 18:36 GMT

ಭಾಗ-1

ಆಸಕ್ತಿಕರ ಅಂಶವೆಂದರೆ, ಚಂಡಮಾರುತ ಪೀಡಿತ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸ್ಮಾರಕವು ತೀವ್ರ ಗಾಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆಯೇ ಎಂಬ ಪರೀಕ್ಷೆಯನ್ನು ನಡೆಸುವುದು ಕಡ್ಡಾಯ ಎಂಬುದನ್ನು ಈ ವರದಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಬಿರುಗಾಳಿಯ ಸಮಯದಲ್ಲಿ ಗಾಳಿಯ ವೇಗವು ಸೆಕೆಂಡ್‌ಗೆ 25 ಮೈಲಿ ಎಂದಷ್ಟೇ ಈ ಸಂಸ್ಥೆಗಳು ವರದಿ ಮಾಡಿವೆ. ಆದರೆ ಇಂಥ ಸ್ಮಾರಕಗಳನ್ನು ಸೆಕೆಂಡ್‌ಗೆ 55 ಮೈಲಿ ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಬೇಕಾಗುತ್ತದೆ.

ಛತ್ರಪತಿ ಶಿವಾಜಿಯ ಜೀವನ ಮತ್ತು ಕಾಲವನ್ನು ಅಜರಾಮರಗೊಳಿಸುವ ಒಂದು ಅದ್ಭುತ ಸ್ಮಾರಕದ ರಚನೆ 1990ರಿಂದಲೂ ರಾಜಕೀಯ ಪಕ್ಷಗಳ ಕನಸಾಗಿತ್ತು. ಸಾಂಪ್ರದಾಯಿಕವಾಗಿ ಶಿವಾಜಿಯ ಎದೆಯ ವರೆಗಿನ ಪ್ರತಿಮೆಗಳು ಮಾತ್ರ ಹೆಚ್ಚಾಗಿ ನಿರ್ಮಾಣ ಮಾಡಲಾಗಿದೆ. ಇವುಗಳಲ್ಲಿ ಬಹುತೇಕವುಗಳನ್ನು ಕೊಲ್ಹಾಪುರದ ಶಿಲ್ಪಕಲಾವಿದರು ರಚಿಸಿದ್ದಾರೆ. ಕೆಲವೊಂದು ಪ್ರತಿಮೆಗಳು ಶಿವಾಜಿ ಸಿಂಹಾಸನದಲ್ಲಿ ಕೂತಿರುವಂತೆ ಮತ್ತು ಕೆಲವೊಂದು ಕುದುರೆಯ ಮೇಲೆ ಕುಳಿತಿರುವಂತಿವೆ. ಆದರೆ, ಕುದುರೆಯ ಮೇಲೇರಿ ಖಡ್ಗವನ್ನು ಮೇಲಕ್ಕೆತ್ತಿರು ಶಿವಾಜಿಯ ಪ್ರತಿಮೆ ಇತ್ತೀಚಿನದ್ದಾಗಿದೆ.

ಸದ್ಯ ನಿರ್ಮಿಸಲು ಉದ್ದೇಶಿಸಲಾಗಿರುವ ಶಿವಾಜಿಯ ಪ್ರತಿಮೆಯ ವಿನ್ಯಾಸವನ್ನು 2013ರಲ್ಲಿ ಜೆ.ಜೆ ಶಿಲ್ಪಕಲಾ ಶಾಲೆಯ ಪ್ರಾಂಶುಪಾಲರು ಮತ್ತವರ ತಂಡ ರಚಿಸಿತ್ತು. ಈ ವಿನ್ಯಾಸದಲ್ಲಿ ಕುದುರೆಯ ಎತ್ತರ 94 ಮೀ. ಆದರೆ ಕುದುರೆ ಮತ್ತು ಶಿವಾಜಿ ಎತ್ತರ 112 ಮೀ. ಆಗಿದೆ. ಈ ಸ್ಮಾರಕದ ಒಟ್ಟಾರೆ ಎತ್ತರ 190 ಮೀಟರ್ ಆಗಿದೆ. ಇದನ್ನು 30 ಮೀ. ಎತ್ತರದ ಪೀಠದಲ್ಲಿ ನಿರ್ಮಿಸಲಾಗುತ್ತಿದೆ. ಈ ಪ್ರತಿಮೆಯಲ್ಲಿ ಮೇಲಕ್ಕೆತ್ತಿರುವ ಕೈಯ ಎತ್ತರ 120 ಮೀ. ಆಗಿದ್ದರೆ ಖಡ್ಗದ ಉದ್ದ 40 ಮೀ. ಆಗಿದೆ. ಇದರ ಹಿಂದಿರುವ ಯೋಚನೆ, ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯನ್ನು ನಿರ್ಮಿಸುವುದು.
ಆದರೆ, ಈ ಲೆಕ್ಕಾಚಾರವು ಅತ್ಯಂತ ಎತ್ತರದ ಮತ್ತು ಒಂಟಿ ಆಧಾರದ ಮೇಲೆ ನಿಂತಿರುವ ಪ್ರತಿಮೆಯ ಸುರಕ್ಷತೆಯ ವಿಷಯದಲ್ಲಿ ಗಂಭೀ ತಾಂತ್ರಿಕ ಸಮಸ್ಯೆಯನ್ನು ಒಡ್ಡಿದೆ.

2014, ಫೆಬ್ರವರಿ 28ರ ಮಹಾರಾಷ್ಟ್ರ ಸರಕಾರದ ಸಂಕಲ್ಪದ ಪ್ರಕಾರ ಶಿವಾಜಿ ಪ್ರತಿಮೆಯನ್ನು ನಾರಿಮನ್ ಪಾಯಿಂಟ್‌ನಿಂದ 2.4 ಕಿ.ಮೀ. ಹಾಗೂ ರಾಜ ಭವನದಿಂದ 1.2 ಕಿ.ಮೀ. ದೂರದಲ್ಲಿರುವ ಸಮದ್ರ ಮಧ್ಯೆಯಿರುವ ಕಲ್ಲಿನ ಮೇಲೆ ನಿರ್ಮಿಸಲು ಯೋಜಿಸಲಾಗಿತ್ತು. ಮುಂಬೈ ಜನಪ್ರಿಯ ಮರೀನ್ ಡ್ರೈವ್‌ಗೆ ಪ್ರತಿಮೆಯು ಸ್ಪಷ್ಟವಾಗಿ ಕಾಣಬೇಕೆಂಬ ಉದ್ದೇಶದಿಂದ ಈ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ಕಲ್ಲಿನ ಭಾಗವು ಸಮುದ್ರದಲ್ಲಿ ಅಲೆಗಳ ಮಟ್ಟವು ಸಾಮಾನ್ಯ ಸಮುದ್ರ ಮಟ್ಟಕ್ಕಿಂತ ಒಂದು ಮೀಟರ್ ಕಡಿಮೆ ಇದ್ದ ಹೊರತು ಬಹುತೇಕವಾಗಿ ನೀರಿನ ಒಳಗೆಯೇ ಇರುತ್ತದೆ. ಈ ಕಲ್ಲಿನ ಎತ್ತರವನ್ನು ಸಾಮಾನ್ಯ ಸಮುದ್ರ ಮಟ್ಟಕ್ಕಿಂತ ಎಂಟು ಮೀಟರ್ ಏರಿಸಿ, ಹಾಗೆ ಪಡೆದ 15.9 ಹೆಕ್ಟೇರ್ ಜಮೀನಿನ ಮೇಲೆ ಶಿವಾಜಿ ಪ್ರತಿಮೆಯನ್ನು ನಿರ್ಮಿಸಲು 2014ರಲ್ಲಿ ಯೋಜಿಸಲಾಗಿತ್ತು. ಈ ಪರಿಕಲ್ಪನೆಯನ್ನು ಸರಕಾರ ಮುಂಬೈಯ ವಿವಿಧ ಇಲಾಖೆಗಳಿಗೆ ರವಾನಿಸಿದಾಗ ಒಂದು ಹೈಪ್ರೊಫೈಲ್ ರಾಜಕೀಯ ಬೆಂಬಲಿತ ಯೋಜನೆಯಾಗಿರುವ ಕಾರಣಕ್ಕೆ ಎಲ್ಲ ಇಲಾಖೆಗಳು ಮರುಮಾತನಾಡದೆ ನಿರಾಕ್ಷೇಪಣಾ ಪತ್ರವನ್ನು ನೀಡಿದ್ದವು. ನಿರಾಕ್ಷೇಪಣಾ ಪತ್ರಗಳ ಭಾಗವಾಗಿದ್ದ ನಿಬಂಧನೆಗಳು ಮತ್ತು ಎಚ್ಚರಿಕೆಗಳನ್ನು ಸರಕಾರ ಅದುಮಿ ಹಾಕಿತ್ತು. ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ಮಾಪನ ಮಾಡುವ ಕಾರ್ಯವನ್ನು ರಾಜ್ಯ ಸರಕಾರ, ಗೋವಾದ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ ಹಾಗೂ ನಾಗ್ಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ)ಗೆ ವಹಿಸಿತ್ತು. ಈ ಸಂಸ್ಥೆಗಳು, ಯೋಜನೆಯಿಂದ ಉಂಟಾಗುವ ವಾಯು ಮತ್ತು ಜಲ ಮಾಲಿನ್ಯದ ಸಾಧ್ಯತೆಗಳನ್ನು ಒಳಗೊಂಡಿರುವ 529 ಪುಟಗಳ ವರದಿಯನ್ನು 2014ರ ನವೆಂಬರ್‌ನಲ್ಲಿ ಒಪ್ಪಿಸಿದ್ದವು.
ಉದಾಹರಣೆಗೆ, ಈ ವರದಿಯಲ್ಲಿ ನೀರಿನ ಗುಣಮಟ್ಟಕ್ಕೆ ಮೀಸಲಿಡಲಾದ 58 ಪುಟಗಳಲ್ಲಿ, ಚರಂಡಿಗಳಿಂದಾಗಿ ನೀರು ಮಲಿನವಾಗಿದೆ ಎಂದು ತಿಳಿಸಲಾಗಿದೆ. ಆದರೆ ಕಳೆದ ಹಲವು ವರ್ಷಗಳಿಂದ ವರ್ಸೋವ ಬೀಚನ್ನು ಹಾಳುಗೈದಿರುವ ತ್ಯಾಜ್ಯದ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ. ಇತ್ತೀಚೆಗಷ್ಟೇ, ಶಿವಾಜಿ ಸ್ಮಾರಕ ವೀಕ್ಷಣೆಯ ವೇದಿಕೆಯಾಗಿರುವ ಮರೀನ್ ಡ್ರೈವ್‌ನಲ್ಲಿ ಅಬ್ಬರದ ಅಲೆಗಳು ಕಸದ ರಾಶಿಯನ್ನು ತಂದು ಎಸೆದಿದ್ದವು. ಈ ಯೋಜನೆಯಿಂದ ಮುಂಬೈಯ ಕಿನಾರೆಯಲ್ಲಿ ವಾಸಿಸುವ ಬೆಸ್ತ ಸಮುದಾಯ ಅತಂತ್ರವಾಗುತ್ತದೆ ಎಂಬ ಅಂಶವನ್ನು ವರದಿ ತಳ್ಳಿಹಾಕಿತ್ತು.
ಕಲ್ಲಿನ ಎತ್ತರವನ್ನು ಹೆಚ್ಚಿಸುವ ಮೂಲಕ ಸೃಷ್ಟಿಯಾಗುವ ಬ್ರೇಕ್ ವಾಟರ್ ಪರಿಣಾಮ, ಜೂನ್ ಮತ್ತು ಸೆಪ್ಟಂಬರ್ ನಡುವಿನ ನಾಲ್ಕು ತಿಂಗಳ ಮಾನ್ಸೂನ್ ಸಮಯದಲ್ಲಿ ಈ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೆ ಇರುವ ಹಾಗೂ ಇತರ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಯಾವ ಉಲ್ಲೇಖವನ್ನೂ ಮಾಡಲಾಗಿಲ್ಲ. ಈ ವರದಿಯನ್ನು ಸಿದ್ಧಪಡಿಸಿರುವ ಎರಡು ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ ವಿಷಯವಾದ, ಪ್ರಯಾಣಿಕರಿಗಾಗಿ ಜಲಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಹಾಗೂ ಇತರ ವಿಷಯಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವರದಿಯಲ್ಲಿ ಈ ಸಂಸ್ಥೆಗಳು ಸೂಚಿಸಿರುವ ಜಲಮಾರ್ಗವು ಅರ್ಧ ಮುಳುಗಿರುವ ಮತ್ತು ಕಣ್ಣಿಗೆ ಕಾಣುವ ದೋಣಿಗಳ ಅವಶೇಷಗಳ ಮೇಲೆ ಸಾಗುತ್ತದೆ. ಈ ಅವಶೇಷಗಳು ಕುಖ್ಯಾತ ಪ್ರಾಂಗ್ಸ್ ರೀಫ್‌ನಲ್ಲಿ ಪತ್ತೆಯಾಗಿದ್ದು ಇಲ್ಲಿ ಜಲಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಲೈಟ್ ಹೌಸ್ ನಿರ್ಮಿಸಲಾಗಿದೆ ಮತ್ತು ಈ ಅಂಶವನ್ನು ಸಮುದ್ರದ ಭೂಪಟದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಗೇಟ್‌ವೇ ಆಫ್ ಇಂಡಿಯ ಮತ್ತು ನಾರಿಮನ್ ಪಾಯಿಂಟ್‌ನಲ್ಲಿರುವ ರಾಷ್ಟ್ರೀಯ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿರುವ ಜೆಟ್ಟಯಿಂದ ಈ ಸ್ಮಾರಕಕ್ಕೆ ಪ್ರತಿದಿನ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿತ್ತು.
ಆಸಕ್ತಿಕರ ಅಂಶವೆಂದರೆ, ಚಂಡಮಾರುತ ಪೀಡಿತ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸ್ಮಾರಕವು ತೀವ್ರ ಗಾಳಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆಯೇ ಎಂಬ ಪರೀಕ್ಷೆಯನ್ನು ನಡೆಸುವುದು ಕಡ್ಡಾಯ ಎಂಬುದನ್ನು ಈ ವರದಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಬಿರುಗಾಳಿಯ ಸಮಯದಲ್ಲಿ ಗಾಳಿಯ ವೇಗವು ಸೆಕೆಂಡ್‌ಗೆ 25 ಮೈಲಿ ಎಂದಷ್ಟೇ ಈ ಸಂಸ್ಥೆಗಳು ವರದಿ ಮಾಡಿವೆ. ಆದರೆ ಇಂಥ ಸ್ಮಾರಕಗಳನ್ನು ಸೆಕೆಂಡ್‌ಗೆ 55 ಮೈಲಿ ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಬೇಕಾಗುತ್ತದೆ. ಈ ಸ್ಮಾರಕಕ್ಕೆ ತೆರಳುವ ಪ್ರವಾಸಿಗರ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಕಾಲಾ ಗೋಡಾದಲ್ಲಿ ಮಾಡಲಾಗುವುದು ಎಂದು ವರದಿ ತಿಳಿಸುತ್ತದೆ. ಆದರೆ ಕಾಲಾ ಗೋಡಾ ಈಗಾಗಲೇ ಒಂದು ಪಾರಂಪರಿಕ ತಾಣ ಎಂದು ಪರಿಗಣಿಸಲಾದ ಪ್ರದೇಶವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷು.
ಪರಿಸರ ವೌಲ್ಯಮಾಪನ ವರದಿಯನ್ನು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಸಚಿವಾಲಯವು ಕೆಲವೊಂದು ಯಾಂತ್ರಿಕ ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಅಷ್ಟೇ ಯಾಂತ್ರಿಕ ಉತ್ತರಗಳನ್ನು ಪಡೆದು ಸಮಾಧಾನಗೊಂಡು 2015 ಫೆಬ್ರವರಿಯಲ್ಲಿ ಪರಿಸರ ಇಲಾಖೆಯ ಅನುಮತಿ ಪತ್ರ ನೀಡಿತು. ಈ ಅನುಮತಿ ಪತ್ರವನ್ನು ಮಹಾರಾಷ್ಟ್ರ ಸರಕಾರವು ಇಡೀ ಯೋಜನೆಗೆ ಸಿಕ್ಕ ಅನುಮತಿ ಪತ್ರವೆಂದು ಪರಿಗಣಿಸಿತು.
ಯಾವುದೇ ಯೋಜನೆಯ ಮೊದಲ ಅಗತ್ಯತೆಯೆಂದರೆ ಸಾಧ್ಯತೆಗಳ ಅಧ್ಯಯನ ನಡೆಸುವುದು. ಅದಕ್ಕಾಗಿ ಸರಕಾರವು, ವಿಧಾನ ಪರಿಷತ್ ಸದಸ್ಯರೊಬ್ಬರ ನೇತೃತ್ವದಲ್ಲಿ ಯೋಜನೆ ಅನುಷ್ಠಾನ ಮತ್ತು ನಿಗಾ ಸಮಿತಿಯನ್ನು ಮತ್ತು ಮುಖ್ಯ ಕಾರ್ಯದರ್ಶಿ ನೇತೃತ್ವದ ಹೈ ಪವರ್ಡ್ ಸ್ಟಿಯರಿಂಗ್ ಸಮಿತಿಯನ್ನು ರಚಿಸಿತು. ಜೊತೆಗೆ ಶ್ರೇಷ್ಠ ಸಮಿತಿ ಮತ್ತು ತಾಂತ್ರಿಕ ಸಮಿತಿಗಳನ್ನೂ ರಚಿಸಲಾಯಿತು. ಇಂಥ ಸಮಿತಿಗಳಿಗೆ ಕಾರ್ಯವನ್ನು ಒಪ್ಪಿಸುವಲ್ಲಿ ಇರುವ ಅಪಾಯವೆಂದರೆ, ಅವುಗಳ ಪ್ರತಿಯೊಬ್ಬ ಸದಸ್ಯ ತಮ್ಮದೇ ಆದ ಕರ್ತವ್ಯಗಳಲ್ಲಿ ವ್ಯಸ್ತವಾಗಿರುತ್ತಾರೆ. ಅವರು ತಮ್ಮ ಮುಂದಿರುವ ಸಮಸ್ಯೆಗೆ ಸಮಿತಿಯ ಇತರ ಸದಸ್ಯರು ಪರಿಹಾರವನ್ನು ಹುಡುಕಬಹುದು ಎಂದು ನಿರೀಕ್ಷಿಸುತ್ತಾರೆ. ಹಾಗೆ ತೆಗೆದುಕೊಂಡ ನಿರ್ಧಾರದ ಹೊಣೆಯನ್ನು ಮಾತ್ರ ಅವರೇ ಹೊರುತ್ತಾರೆ.

Writer - ಐ. ಸಿ. ರಾವ್

contributor

Editor - ಐ. ಸಿ. ರಾವ್

contributor

Similar News

ಜಗದಗಲ
ಜಗ ದಗಲ