ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌದಿ ಅರೇಬಿಯದ ಈ ವ್ಯಕ್ತಿ ಕಳೆದ 30 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ!

Update: 2018-07-21 10:47 GMT

70 ವರ್ಷಗಳನ್ನು ದಾಟಿರುವ ಸೌದಿ ಅರೇಬಿಯದ ಈ ವ್ಯಕ್ತಿ ಕಳೆದ 30 ವರ್ಷಗಳಲ್ಲಿ ಒಂದು ನಿಮಿಷವೂ ನಿದ್ರೆಯ ಸುಖವನ್ನು ಅನುಭವಿಸಿಲ್ಲ. ಇತ್ತೀಚಿಗಷ್ಟೇ ಈ ವ್ಯಕ್ತಿಗೆ ಉಚಿತವಾಗಿ ಕಾರು ಲಭಿಸಿದೆ.

ಹಲವಾರು ವೈದ್ಯರು ಮತ್ತು ವಿಶೇಷಜ್ಞರು ಈ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿ ಸಮಸ್ಯೆಗೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಸೇನೆಯಲ್ಲಿ ನಿಯೋಜನೆಯ ಸಂದರ್ಭದಲ್ಲಿ ಈ ವ್ಯಕ್ತಿ ಸತತ 20 ದಿನಗಳವರೆಗೆ ಎಚ್ಚರವಾಗಿಯೇ ಇದ್ದ. ಅಂದಿನಿಂದ ನಿದ್ರೆಯಿಲ್ಲದ ಸಮಸ್ಯೆ ಈತನನ್ನು ಕಾಡುತ್ತಿದೆ.

ಸೇನೆಯಲ್ಲಿ ತನ್ನ ಸೇವೆ ಮುಗಿದ ಬಳಿಕ ಈತ ವೈದ್ಯರನ್ನು ಕಂಡು ತನ್ನ ಸಮಸ್ಯೆಗೆ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದ.

ನಾಲ್ಕು ದೇಶಗಳ ವೈದ್ಯರನ್ನೊಳಗೊಂಡ ತಂಡಕ್ಕೂ ಕೂಡ ಈತನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಖಿನ್ನತೆ ಈತನ ದೀರ್ಘಕಾಲಿನ ನಿದ್ರಾಹೀನತೆಗೆ ಮೂಲಕಾರಣವಾಗಿರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ನಿದ್ರಾಹಿನತೆಯಿಂದ ಪಾರಾಗಲು ಈ ವ್ಯಕ್ತಿ ಸೇವಿಸದ ಔಷಧಿಗಳಿಲ್ಲ,ಆದರೂ ನಿದ್ರಾದೇವಿಗೆ ಈತನ ಮೇಲೆ ಕರುಣೆಯುಂಟಾಗಿಲ್ಲ.

 ಅಲ್ ಬಹಾ ಪ್ರದೇಶದ ಅಮೀರ್‌ಗೆ ಈ ವ್ಯಕ್ತಿಯ ಕರುಣಾಜನಕ ಕಥೆ ತಿಳಿದಾಗ ತಕ್ಷಣ ಸ್ಪಂದಿಸಿದ್ದಾರೆ. ತನ್ನ ಕುಟುಂಬಕ್ಕೆ ಕಾರೊಂದನ್ನು ಹೊಂದುವುದು ಈತನ ಏಕೈಕ ಆಸೆಯಾಗಿದೆ ಎನ್ನುವುದು ಗೊತ್ತಾದಾಗ ಅಮೀರ್ ಈತನಿಗೆ ಉಚಿತವಾಗಿ ಕಾರೊಂದನ್ನು ನೀಡಿದ್ದಾರೆ. ಅಲ್ಲದೆ ಆತನ ಎಲ್ಲ ಅಗತ್ಯಗಳಿಗೂ ಸ್ಪಂದಿಸುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News