"ನೀವು ಹೆಚ್ಚು ಹೆಚ್ಚು ನಗಬೇಕು" ಎಂದ ಟ್ವಿಟರ್ ಬಳಕೆದಾರನಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2018-07-22 14:39 GMT

ಹೊಸದಿಲ್ಲಿ, ಜು.22: ಲೋಕಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. "ನೀವು ಹೆಚ್ಚು ಹೆಚ್ಚು ನಗುತ್ತಾ ಇರಬೇಕು" ಎಂದು ಟ್ವಿಟರ್ ಬಳಕೆದಾರರೊಬ್ಬರು ಅಪೇಕ್ಷಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಮೋದಿ "ಈ ಅಂಶವನ್ನು ಪರಿಗಣಿಸಲಾಗಿದೆ" ಎಂದಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ಶನಿವಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, #ಪಿಎಂಇನ್‍ಶಹಜಹಾನ್‍ಪುರ ಹ್ಯಾಶ್‍ಟ್ಯಾಗ್ ಬಳಸಿಕೊಂಡು ಟ್ವೀಟ್ ಮಾಡಿದವರಿಗೆ ಉತ್ತರಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡ ಬಳಿಕವೂ ಶನಿವಾರ ಶಹಜಹಾನ್‍ಪುರ ರ್ಯಾಲಿಯಲ್ಲಿ ಪಾಲ್ಗೊಂಡ ಮೋದಿಯವರನ್ನು ಶ್ಲಾಘಿಸಿದ ಟ್ವಿಟ್ಟರ್ ಬಳಕೆದಾರರೊಬ್ಬರಿಗೆ, "125 ಕೊಟಿ ಭಾರತೀಯರ ಆಶೀರ್ವಾದ ಈ ಶಕ್ತಿ ನೀಡಿದೆ" ಎಂದು ಮೋದಿ ಉತ್ತರಿಸಿದ್ದಾರೆ.

"ಶನಿವಾರ ಮೋದಿ ರ್ಯಾಲಿಯನ್ನು ಅಜ್ಜನೊಂದಿಗೆ ವೀಕ್ಷಿಸಿದ್ದೆ. ಆದರೆ ಅಜ್ಜ ಇನ್ನಿಲ್ಲ" ಎಂದು ಟ್ವೀಟ್ ಮಾಡಿದ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ, "ನಿಮ್ಮ ಅಜ್ಜನ ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಈ ಶೋಕ ಸಂದರ್ಭದಲ್ಲಿ ನನ್ನ ಶ್ರದ್ಧಾಂಜಲಿ" ಎಂದಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರನ್ನು ಸೆಳೆಯಲು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಸಕ್ರಿಯರಾಗಲಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News