ಬ್ರಿಟನ್ ದಂಪತಿಗೆ ಐದು ಲಕ್ಷದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊಚಾಲಕ

Update: 2018-07-23 04:19 GMT

ಮುಂಬೈ, ಜು. 23: ಲಂಡನ್ ಮೂಲದ ದಂಪತಿ ಆಟೊದಲ್ಲಿ ಬಿಟ್ಟು ಹೋಗಿದ್ದ ಐದು ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ ಎಲ್ಲರಿಗೆ ಮಾದರಿಯಾಗಿದ್ದಾನೆ.

ಜುಲೈ 18ರಂದು ಆಟೊದಲ್ಲಿ ಕಪ್ಪು ಬ್ಯಾಗ್ ಇರುವುದು ಮುಂಬೈನ ಮೀರಾ ರಸ್ತೆಯ ಆಟೊ ಚಾಲಕ ಬಿಪಿನ್ ಪಟೇಲ್ ಗಮನಕ್ಕೆ ಬಂತು. ಅದರಲ್ಲಿ ಚಿನ್ನಾಭರಣಗಳು ಇದ್ದವು. ಇದು ಸ್ವಲ್ಪ ಮೊದಲು ತಮ್ಮ ಆಟೊದಲ್ಲಿ ಪ್ರಯಾಣಿಸಿದ ವಿದೇಶಿ ದಂಪತಿಯದ್ದು ಇರಬೇಕು ಅಂದುಕೊಂಡು ಪಟೇಲ್ ಇದನ್ನು ಕಶಿಮಿರಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

ಜತೆಗೆ ದಂಪತಿಯನ್ನು ಎಲ್ಲಿ ಆಟೊದಿಂದ ಇಳಿಸಲಾಗಿತ್ತು ಎನ್ನುವುದನ್ನೂ ಪೊಲೀಸರಿಗೆ ಪಟೇಲ್ ವಿವರಿಸಿದ್ದರು. ಸ್ಥಳೀಯ ಕ್ರೈಂಬ್ರಾಂಚ್ ಪೊಲೀಸರು ಜುಲ್ಫಿಕರ್ ಲಕ್ಡಾವಾಲಾ- ರಚನಾ ದಂಪತಿಯನ್ನು ಪತ್ತೆ ಮಾಡಿದ್ದರು. ಇಬ್ಬರೂ ವಕೀಲರಾಗಿದ್ದು, ಭಾರತಕ್ಕೆ ಭೇಟಿ ನೀಡಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಬ್ಯಾಗ್ ಹಸ್ತಾಂತರಿಸಲಾಯಿತು. 2002ರಿಂದಲೂ ಲಂಡನ್‌ನಲ್ಲಿರುವ ದಂಪತಿ ಆಟೊದಿಂದ ಇಳಿದು ಹೋದ ಬಳಿಕ ಬ್ಯಾಗ್ ಬಿಟ್ಟಿರುವುದು ನೆನಪಾಗಿ, ಅದನ್ನು ಮರಳಿ ಪಡೆಯುವ ಆಸೆ ಬಿಟ್ಟಿದ್ದರು. ಆದರೆ ಆಟೊ ಚಾಲಕನ ಪ್ರಾಮಾಣಿಕತೆಯನ್ನು ಪೊಲೀಸರು ಹಾಗೂ ಪಟೇಲ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News