ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಸುಪ್ರೀಂ ಅನುಮತಿ

Update: 2018-07-23 13:58 GMT

ಹೊಸದಿಲ್ಲಿ,ಜು.23: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಜು.23ರಿಂದ 31ರವರೆಗೆ ಬ್ರಿಟನ್,ಫ್ರಾನ್ಸ್ ಮತ್ತು ಅಮೆರಿಕಗಳಿಗೆ ಭೇಟಿ ನೀಡಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹಸಿರು ನಿಶಾನೆ ತೋರಿಸಿದೆ. ಈ ಹಿಂದಿನ ತನ್ನ ಇಂತಹುದೇ ಆದೇಶದಲ್ಲಿನ ಷರತ್ತುಗಳಿಗೆ ಅವರು ಬದ್ಧರಾಗಿರಬೇಕು ಎಂದು ಅದು ಸ್ಪಷ್ಟ ಪಡಿಸಿದೆ.

ವಿದೇಶ ಪ್ರಯಾಣದಿಂದ ಮರಳಿದ ಬಳಿಕ ತನ್ನ ಪಾಸ್‌ಪೋರ್ಟ್‌ನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಕಾರ್ತಿಗೆ ನಿರ್ದೇಶ ನೀಡಿತು. ಕಾರ್ತಿ ಏರ್‌ಸೆಲ್ ಮ್ಯಾಕ್ಸಿಸ್,ಐಎನ್‌ಎಸ್ ಮೀಡಿಯಾ ಮತ್ತು ಅಕ್ರಮ ಹಣ ವಹಿವಾಟುಗಳಂತಹ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News