ಖಚಿತತೆ: ಔದ್ಯಮಿಕ ಯುಗದ ತಿರುಳು

Update: 2018-07-24 18:33 GMT

ಇಂದು ಖಚಿತತೆ, ಪರಿಪೂರ್ಣತೆಗೆ ಎಷ್ಟೊಂದು ಒತ್ತು ನೀಡಲಾಗುತ್ತಿದೆ ಎಂದರೆ ಮನುಷ್ಯನ ಕೂದಲಿನ ದಪ್ಪದ ಐವತ್ತನೇ ಒಂದು ಭಾಗದಷ್ಟು ವ್ಯತ್ಯಾಸ ಆಧುನಿಕ ಯುಗದ ಚಿಕ್ಕ ಚಿಕ್ಕ ಯಂತ್ರ ಸಾಧನಗಳನ್ನು ಹಾಳುಗೆಡವಬಹುದು ಮತ್ತು ರಾಕೆಟ್‌ಗಳನ್ನು ಯದ್ವಾತದ್ವಾ ಹಾರಿಸಿಬಿಡಬಹುದು.

ಚಿತತೆ ಆಧುನಿಕ ಬದುಕಿನ ಒಂದು ಪ್ರಮುಖ ಅವಶ್ಯಕತೆ. ಅಲೈನ್‌ಮೆಂಟ್ ಸರಿಯಿಲ್ಲದ ಚಕ್ರಗಳಿಂದಾಗಿ ಗಂಟೆಗೆ 100 ಮೈಲುಗಳ ವೇಗದಲ್ಲಿ ಓಡುವ ಕಾರು ತರಬಹುದಾದ ಭಯಾನಕ ಪರಿಣಾಮಗಳನ್ನು ಕಲ್ಪಿಸಿಕೊಳ್ಳಿ. ಒಂದು ಜೆಟ್ ವಿಮಾನದ ಕಂಪ್ರೆಸರ್ ಸರಿಯಾಗಿ ಕೆಲಸ ಮಾಡದಾದಾಗ ಅಥವಾ ಒಂದು ಆಪರೇಷನ್ ಥಿಯೇಟರ್‌ನ ಆಮ್ಲಜನಕ ಪೈಪ್ ದೋಷಪೂರಿತವಾದಾಗ ಏನೇನೋ ಗಂಡಾಂತರಗಳಾಗಬಹುದೆಂದು ಊಹಿಸಿ.

ಖಚಿತತೆ ಇಲ್ಲದೆ ಇದ್ದಲ್ಲಿ ಆಧುನಿಕ ಬದುಕೇ ಸಾಧ್ಯವಿಲ್ಲ. ಜೇಮ್ಸ್‌ವ್ಯಾಟ್‌ನ ಉಗಿ ಯಂತ್ರದಿಂದ ಆರಂಭಿಸಿ 1774ರಲ್ಲಿ ಗನ್ ತಯಾರಿಸಿದ ಜಾನ್ ವಿಲ್ಕಿನ್‌ಸನ್‌ನ ಗನ್ ಯಂತ್ರದವರೆಗೆ ಖಚಿತತೆ ಕೆಲಸ ಮಾಡಿತ್ತು.
ವಿಲ್ಕಿನ್‌ಸನ್ 1775ರ ಸುಮಾರಿಗೆ ವ್ಯಾಟ್‌ನೊಂದಿಗೆ ವ್ಯಾಪಾರ ಮಾಡಲಾರಂಭಿಸಿದ್ದ. ಆತ ಉಗಿ ಶಕ್ತಿಯನ್ನು ಕೋವಿಗಳೊಂದಿಗೆ ವಿಲೀನಗೊಳಿಸಿದ. ನೀರನ್ನು ಕುದಿಸಿದಾಗ ಅದು ಆವಿಯ ರೂಪ ಪಡೆದು ನೀರಿಗಿಂತ 1,700 ಪಟ್ಟು ಹೆಚ್ಚು ಸ್ಥಳವನ್ನು ಆಕ್ರಮಿಸಿಕೊಂಡು ಅಸಾಮಾನ್ಯ ತಳ್ಳ್ಳು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ವ್ಯಾಟ್‌ನ ಉಗಿಯಂತ್ರ ಮತ್ತು ವಿಲ್ಕಿನ್‌ಸನ್‌ನ ಕೋವಿಗಳು ಬ್ರಿಟಿಷ್ ನೌಕಾಪಡೆಗೆ ಅಪಾರವಾದ ಶಸ್ತ್ರಬಲ ತುಂಬಿ ಪ್ರಪಂಚದ ಹಲವು ಭಾಗಗಳನ್ನು ಗೆಲ್ಲಲು ನೆರವಾದವು.
ಅದೇ ರೀತಿ ಒಡೆಯಲಾಗದ ಬೀಗಗಳನ್ನು ವಿನ್ಯಾಸಗೊಳಿಸಿದ ಜೋಸೆಫ್ ಬ್ರಮಾಹ್ ಖಚಿತತೆಯನ್ನು ಮುಂದಿನ ಹಂತಕ್ಕೊಯ್ದು ಸಾವಿರಾರು ಮನೆಗಳ ಸುರಕ್ಷತೆಗೆ ನೆರವಾದ.

ಮಿಲಿಟರಿಯ ಪಾತ್ರ

ತಂತ್ರಜ್ಞಾನ ಮತ್ತು ಖಚಿತತೆಯ ಬೆಳವಣಿಗೆಯಲ್ಲಿ ಸೇನೆ ದೊಡ್ಡ ಪಾತ್ರ ವಹಿಸಿದೆ. ಹೊನೋರ್ ಬ್ಲಾಂಕ್ ಎಂಬಾತ ಫ್ರಾನ್ಸ್‌ನ ಗನ್ ತಯಾರಿಕೆಯಲ್ಲಿ, ಅದರ ಭಾಗಗಳಲ್ಲಿ ಏಕ ರೂಪತೆಯನ್ನು ತಂದು ಕೋವಿಗಳ ರಾಶ್ಯುತ್ಪನ್ನಕ್ಕೆ ಕಾರಣನಾದ. ಕೋಲ್ಟ್, ವಿಂಚೆಸ್ಟರ್, ರೆಮಿಂಗ್ಟನ್ ಇತ್ಯಾದಿ ಕಂಪೆನಿಗಳು ಕೋವಿ ಉದ್ಯಮದಲ್ಲಿ ಖ್ಯಾತಿ ಹೊಂದಿದವು. ಐಸಾಕ್ ಸಿಂಗರ್ ಹೊಲಿಗೆ ಯಂತ್ರಗಳಿಗೆ ಖಚಿತತೆಯನ್ನು ನೀಡಿದ.
1851ರಲ್ಲಿ ಲಂಡನ್‌ನ ಹೈಡ್‌ಪಾರ್ಕ್‌ನಲ್ಲಿ ಬ್ರಿಟನ್ ಎಲ್ಲ ದೇಶಗಳ ಒಂದು ಔದ್ಯಮಿಕ ಮಹಾ ಪ್ರದರ್ಶನವನ್ನು ಏರ್ಪಡಿಸಿತು. ಯುರೋಪಿನಾದ್ಯಂತ ರೈಲುಗಳು ಚಲಿಸಲಾರಂಭಿಸಿದವು.

ಸ್ಕ್ರೂಗಳ ಶೋಧನೆ
  ಜೋಸೆಫ್ ವಿತ್‌ವರ್ತ್ (1822-1887) ಎಂಬಾತ ಖಚಿತತೆಯನ್ನು ಇನ್ನು ಮುಂದುವರಿಸಿ ಸ್ಕ್ರೂಗಳನ್ನು, ಲೇತ್‌ಗಳನ್ನು, ಪಂಚಿಂಗ್, ಡ್ರಿಲಿಂಗ್ ಮತ್ತು ಬೋರಿಂಗ್ ಯಂತ್ರಗಳನ್ನು ತಯಾರಿಸಿದ್ದಲ್ಲದೆ, ಈ ಮಹಾ ಪ್ರದರ್ಶನದಲ್ಲ್ಲಿ ತಾನು ಸೃಷ್ಟಿಸಿದ ವಿತ್‌ವರ್ತ್ ರೈಫಲ್‌ನ್ನು ಪ್ರದರ್ಶಿಸಿದ. ‘ಶಾರ್ಫ್ ಸೂಟರ್’ ಎಂದೇ ಪ್ರಸಿದ್ಧ್ದವಾದ ಆ ರೈಫಲ್‌ನ ಟ್ರಿಗರ್ ಎಳೆದೇ ಬ್ರಿಟನಿನ ರಾಣಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿದ್ದರು.


  
 ಚಕ್ರಗಳ ಯುಗ
 ಹೊಸ ಶತಮಾನದ ಅಂತ್ಯದ ವೇಳೆಗೆ ವಾಹನಗಳ ರಂಗದಲ್ಲಿ ಖಚಿತತೆಯ ಯುಗ ಆರಂಭವಾಯಿತು. ಹೆನ್ರಿ ರಾಸ್ ‘ಅತ್ಯುತ್ತಮ ಕಾರು’ನ್ನು ಸೃಷ್ಟಿಸಲು ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ವರ್ಕ್‌ಶಾಪ್ ಒಂದನ್ನು ಸ್ಥಾಪಿಸಿದ. ಹೆನ್ರಿ ಫೋರ್ಡ್ ಅಮೆರಿಕದಲ್ಲಿ ಕಾರುಗಳ ರಾಶ್ಯುತ್ಪನ್ನಕ್ಕಾಗಿ ಡೆಟ್ರಾಯ್ಟಾ ನಗರದಲ್ಲಿ ಕಾರ್ಖಾನೆಯೊಂದನ್ನು ಆರಂಭಿಸಿದ. ಲಂಡನ್‌ನ ಶ್ರೀಮಂತ ಚಾರ್ಲ್ಸ್ ರೋಲ್ಸ್, ಹೆನ್ರಿಯ ಕಾರಿನ ಫೋಟೊ ನೋಡಿ ಮೂಕ ವಿಸ್ಮಿತನಾದ. ಹೆನ್ರಿಯ ಜೊತೆಗೂಡಿ ರೋಲ್ಸ್- ರ್ಯೊಸ್ ಕಾರು ಕಾರ್ಖಾನೆ ಸ್ಥಾಪಿಸಿದ. ಇವರಿಬ್ಬರ ಯೋಚನೆಯ ಫಲವಾದ ರೋಲ್ಸ್ -ರ್ಯೊಸ್ ವಾಹನಯುಗದ ಕಿರೀಟವಾಯಿತು.
ಮೊದಲ ಫೋರ್ಡ್‌ನ ಮಾಡೆಲ್ ಎ ಕಾರು 1908ರಲ್ಲಿ ಕಾರ್ಖಾನೆಯಿಂದ ಹೊರಬಂತು. 19 ವರ್ಷಗಳಲ್ಲಿ ಫೋರ್ಡ್ ಟಿ ಮಾಡೆಲ್‌ನ 16,500,000 ಕಾರುಗಳು ಮಾರಾಟವಾದವು. ಪ್ರತೀ 40 ಸೆಕೆಂಡುಗಳಲ್ಲಿ ಒಂದು ಕಾರು ತಯಾರಾಗುತ್ತಿತ್ತು.
ರಾಶ್ಯುತ್ಪನ್ನದ ಪರಿಣಾಮವಾಗಿ 1996ರಲ್ಲಿ 850 ಡಾಲರ್ ಇದ್ದ ಕಾರಿನ ಬೆಲೆ 1925ರಲ್ಲಿ 260 ಡಾಲರ್‌ಗೆ ಇಳಿಯಿತು.

ಛಾಯಾಚಿತ್ರ ಪ್ರಪಂಚಕ್ಕೆ

ಛಾಯಾಚಿತ್ರ ಪ್ರಪಂಚಕ್ಕೆ (ಫೋಟೊಗ್ರಫಿ) ಪ್ರಪಂಚದಲ್ಲಿ ಖಚಿತತೆ ಹೊಸ ಅರ್ಥಗಳನ್ನು ಪಡೆಯಿತು. ಮೊದಲ ಫೋಟೊ 1826ರಲ್ಲಿ ಫ್ರಾನ್ಸ್‌ನ ಹಳ್ಳಿ ಸೈಂಟ್-ಲೂಪ್-ಡಿ ವೆರೆನೆಸ್‌ನಲ್ಲಿ ತಯಾರಾಗಿತ್ತು. ಇಂದಿನ ಕ್ಯಾಮರಾಗಳು ಅತ್ಯಂತ ಸೂಕ್ಷ್ಮವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲವು. ಹಬ್‌ಲ್ ವ್ಯೋಮ ದೂರದರ್ಶಕ ತೆಗೆಯುವ ಮಿಲಿಯಗಟ್ಟಲೆ ಮೈಲು ದೂರದ ಆಕಾಶಕಾಯಗಳ ಚಿತ್ರಗಳು ನಮ್ಮನ್ನು ಇಂದು ದಂಗುಬಡಿಸುತ್ತಿವೆ. ಆದರೆ, 1990ರ ಎಪ್ರಿಲ್ 24ರಂದು ಕಾರ್ಯಾಚರಿಸಿದ ಹಬ್‌ಲ್ ಮನುಷ್ಯನ ಕೂದಲಿನ ದಪ್ಪದ 50ನೇ ಒಂದು ಭಾಗದಷ್ಟು ಮಾತ್ರ ಹೆಚ್ಚು ಖಚಿತತೆ ಹೊಂದಿತ್ತು. ಆದರೆ, ವಿಜ್ಞಾನಿಗಳನ್ನು ನಿರಾಶೆಗೊಳಿಸಲು ಇಷ್ಟೇ ಸಾಕಾಯಿತು. ‘‘ತೆರಿಗೆದಾರರು ಹಣದ ವ್ಯರ್ಥ ವೆಚ್ಚ’’ಕ್ಕಾಗಿ ನಾಸಾ ಟೀಕೆಗೊಳಗಾಯಿತು.

ಸಾಗರಗಳಾಚೆ

ತೈಲಬಾವಿ ಕೊರೆಯುವಾತ ನಕಾಶೆಯೊಂದರ ಮೇಲೆ “x” ಗುರುತು ಮಾಡಿದ ಸ್ಥಳದಿಂದ 200 ಅಡಿಗಳ ವ್ಯಾಪ್ತಿಯೊಳಗೆ ಸಾಗರದಲ್ಲಿ ಒಬ್ಬ ತೈಲ ರಿಗ್‌ಅನ್ನು ಇರಿಸಬಲ್ಲವನಾದರೆ ಆತ ತಾನು ತುಂಬಾ ಕರಾರುವಾಕ್ಕಾಗಿ, ಖಚಿತವಾಗಿ ಕೆಲಸ ಮಾಡುವವ ಎಂದು ಹೇಳಿಕೊಳ್ಳುತ್ತಿದ್ದ. ಆದರೆ, ಇಂದಿನ ಮಾನದಂಡಗಳ ಪ್ರಕಾರ ಆತ ನಾಲಾಯಕ್‌ಎನಿಸಿಕೊಳ್ಳುತ್ತಾನೆ. ಯಾಕೆಂದರೆ ಈಗ ಭೂಮಿಯ ಮೇಲಿರುವ ಸ್ಥಳಗಳನ್ನು ಮಿಲಿಮೀಟರ್‌ಗಳಷ್ಟು ಖಚಿತವಾಗಿ ಜಿಪಿಎಸ್(ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಗುರುತಿಸಬಲ್ಲದಾಗಿದೆ. ಭೂಮಿಯ ಕಕ್ಷೆಯಲ್ಲಿ ಇಷ್ಟರ ವರೆಗೆ 70 ಜಿಪಿಎಸ್ ಉಪಗ್ರಹಗಳನ್ನು ಇರಿಸಲಾಗಿದೆ. 12,000 ಮೈಲುಗಳ ಎತ್ತರದಲ್ಲಿ ಕಾರ್ಯಾಚರಿಸುವ ಇವುಗಳ ಪೈಕಿ 31 ಇನ್ನೂ ಕಕ್ಷೆಯಲ್ಲಿವೆ. ಲಿಬಿಯಾದ ಸರ್ವಾಧಿಕಾರಿ ಗದ್ದಾಫಿಯನ್ನು ಅವನ ಅರಮನೆಯಲ್ಲಿ ಪತ್ತೆಮಾಡಿದ್ದು ಇದೇ ಜಿಪಿಎಸ್.

ಕಂಪ್ಯೂಟರ್ ಯುಗಕ್ಕೆ


ಟ್ರಾನ್ಸಿಸ್ಟರ್‌ಗಳ ಹಾಗೂ ಚಿಪ್ಸ್‌ಗಳ ಶೋಧ ಅಲ್ಟ್ರಾ-ಪ್ರಿಸಿಶನ್‌ನ ಯುಗವನ್ನು ಆರಂಭಿಸಿತು. ಇವತ್ತು ಭೂಮಿಯ ಮೇಲೆ ಇರುವ ಎಲೆಗಳಿಗಿಂತ ಹೆಚ್ಚು ಟ್ರಾನ್ಸಿಸ್ಟರ್‌ಗಳಿವೆ. 1947ರಲ್ಲಿ ಮಗುವೊಂದರ ಕೈಯ ಗಾತ್ರದಷ್ಟಿದ್ದ ಒಂದು ಟ್ರಾನ್ಸಿಸ್ಟರ್ 1971ರಲ್ಲಿ ಮನುಷ್ಯನ ಕೂದಲಿನ 10ನೇ ಒಂದು ಭಾಗದಷ್ಟು ಗಾತ್ರಕ್ಕೆ ಇಳಿಯಿತು.

ಸಮಯದ ಯಂತ್ರಗಳು


1969ರಲ್ಲಿ ಜಪಾನ್‌ನಲ್ಲಿ ಆದ ಕ್ವಾರ್ಟ್ಝ್ ಕ್ರಾಂತಿ ಸ್ವಿಸ್‌ವಾಚ್ ಉದ್ಯಮವನ್ನು ಮಣಿಸಿಬಿಟ್ಟಿತು. ಅಲ್ಲಿದ್ದ 1,600 ವಾಚ್ ತಯಾರಿಕಾ ಕಂಪೆನಿಗಳ ಸಂಖ್ಯೆ ಒಂದು ದಶಕದಲ್ಲಿ 600ಕ್ಕೆ ಇಳಿಯಿತು. ಜಪಾನಿನ ವಾಚುಗಳು ಪ್ರತಿದಿನ ಅಥವಾ ಪ್ರತಿವಾರ ವಾಚುಗಳಿಗೆ ಕೀ ಕೊಡುವು(ವೈಂಡಿಗ್) ದನ್ನು ಅಂತ್ಯಗೊಳಿಸಿದ್ದಷ್ಟೇ ಅಲ್ಲ, ಟೈಮಿಂಗ್ ಅಡ್ಜಸ್ಟ್ ಮೆಂಟ್‌ಗಳನ್ನು ಕೊನೆಗೊಳಿಸಿದವು. ನಿಜಹೇಳಬೇಕೆಂದರೆ ಜಪಾನೀ ಶಬ್ದ ‘ಸೀಕೊ’ ಅಂದರೆ ಅತ್ಯುತ್ತಮ ಕೌಶಲ್ಯ ಅಥವಾ ‘ಖಚಿತತೆ’

Writer - ಎಂ ಎ.ಸಿರಾಜ್

contributor

Editor - ಎಂ ಎ.ಸಿರಾಜ್

contributor

Similar News

ಜಗದಗಲ
ಜಗ ದಗಲ