ಹಜ್ ಯಾತ್ರಿಕರಿಗೆ ಆರೋಗ್ಯ ಸೇವೆ: ಗರಿಷ್ಠ ದಕ್ಷತೆಗೆ ಸೌದಿ ಆರೋಗ್ಯ ಸಚಿವಾಲಯ ಯೋಜನೆ

Update: 2018-07-25 17:51 GMT

 ಜಿದ್ದಾ, ಜು. 25: ಹಜ್ ಯಾತ್ರಿಕರಿಗೆ ಒದಗಿಸಲಾಗುವ ಆರೋಗ್ಯ ಸೇವೆಗಳಲ್ಲಿ ಗರಿಷ್ಠ ದಕ್ಷತೆಯನ್ನು ತರಲು ಸೌದಿ ಅರೇಬಿಯದ ಆರೋಗ್ಯ ಸಚಿವಾಲಯವು ಸಮಗ್ರ ಯೋಜನೆಯೊಂದನ್ನು ಜಾರಿಗೊಳಿಸುತ್ತಿದೆ.

ಸುಸಜ್ಜಿತ ಆರೋಗ್ಯ ಪರಿಕರಗಳು ಮತ್ತು ಪರಿಣತ ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಂಡು ಮುಂಚಿತ ಹಾಗೂ ತುರ್ತು ಚಿಕಿತ್ಸೆಗಳನ್ನು ನೀಡಲು ಯೋಜನೆ ಉದ್ದೇಶಿಸಿದೆ.

ಈ ಹಿನ್ನೆಲೆಯಲ್ಲಿ, ಜಿದ್ದಾದಲ್ಲಿರುವ ದೊರೆ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯ ನಿಗಾ ಕೇಂದ್ರವು ವೈದ್ಯರು, ತಾಂತ್ರಿಕ ವರ್ಗದವರು ಮತ್ತು ವ್ಯವಸ್ಥಾಪಕರ ತರಬೇತಿಯನ್ನು ಪೂರ್ಣಗೊಳಿಸಿದೆ.

ಸೌದಿ ಅರೇಬಿಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವುದು ಮತ್ತು ಚಿಕಿತ್ಸೆ ನೀಡುವುದು ಹಾಗೂ ಯಾತ್ರಿಕರ ಆರೋಗ್ಯದ ಮೇಲೆ ನಿಗಾ ಇಡುವುದು ಈ ಸಿಬ್ಬಂದಿಯ ಕೆಲಸವಾಗಿದೆ.

ಅದೇ ವೇಳೆ, ಮುಂಬರುವ ಹಜ್ ಋತುವಿಗಾಗಿ ಸೌದಿ ರೆಡ್ ಕ್ರೆಸೆಂಟ್ ಪ್ರಾಧಿಕಾರವೂ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News