ಇಸ್ರೇಲಿಗರಿಗೆ ಇರಿದ ಫೆಲೆಸ್ತೀನಿಯನ ಮನೆ ಧ್ವಂಸ
Update: 2018-07-27 23:45 IST
ಜೆರುಸಲೇಮ್, ಜು. 27: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗರ ವಸಾಹತಿನಲ್ಲಿರುವ ಮನೆಯೊಂದಕ್ಕೆ ನುಗ್ಗಿ ಮೂವರಿಗೆ ಇರಿದ ಆರೋಪ ಹೊತ್ತಿರುವ ಫೆಲೆಸ್ತೀನ್ ವ್ಯಕ್ತಿಯೋರ್ವನ ಗ್ರಾಮದಲ್ಲಿ ಇಸ್ರೇಲ್ ಸೈನಿಕರು ಶುಕ್ರವಾರ ಶೋಧ ನಡೆಸಿದ್ದಾರೆ.
ಇರಿತಕ್ಕೊಳಗಾದ ಮೂವರ ಪೈಕಿ ಓರ್ವ ವ್ಯಕ್ತಿ ಬಳಿಕ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಲು ನಾಲ್ವರು ಫೆಲೆಸ್ತೀನಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಹಂತಕನ ಗ್ರಾಮದ ದ್ವಾರದಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ಸೈನಿಕರು ಫೆಲೆಸ್ತೀನ್ ದಾಳಿಕೋರನ ಮನೆಯನ್ನು ತಪಾಸಣೆ ನಡೆಸಿ ಬಳಿಕ ಧ್ವಂಸಗೊಳಿಸಿದರು.