×
Ad

ಈಜಿಪ್ಟ್: ಮುಸ್ಲಿಮ್ ಬ್ರದರ್‌ಹುಡ್‌ನ 75 ಮಂದಿಗೆ ಗಲ್ಲು

Update: 2018-07-28 23:31 IST

ಕೈರೋ (ಈಜಿಪ್ಟ್), ಜು. 28: 2013ರಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿರುವುದಕ್ಕಾಗಿ ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಯ ಉನ್ನತ ನಾಯಕರು ಸೇರಿದಂತೆ ಈಜಿಪ್ಟ್‌ನ ನ್ಯಾಯಾಲಯವೊಂದು 75 ಮಂದಿಗೆ ಮರಣ ದಂಡನೆ ವಿಧಿಸಿದೆ.

ಕೈರೋ ಕ್ರಿಮಿನಲ್ ನ್ಯಾಯಾಲಯವು ಶನಿವಾರ ನೀಡಿದ ತೀರ್ಪನ್ನು ದೇಶದ ಉನ್ನತ ಧಾರ್ಮಿಕ ಪ್ರಾಧಿಕಾರ ‘ಗ್ರಾಂಡ್ ಮುಫ್ತಿ’ಯ ಪರಿಶೀಲನೆಗೆ ಕಳುಹಿಸಲಾಗುವುದು. ತೀರ್ಪುಗಳನ್ನು ಪರಿಶೀಲಿಸಿ ಅವರು ಅಭಿಪ್ರಾಯ ನೀಡುತ್ತಾರಾದರೂ ಅದನ್ನು ಪಾಲಿಸುವುದು ಕಡ್ಡಾಯವಲ್ಲ.

2013ರಲ್ಲಿ ಮುಸ್ಲಿಮ್ ಬ್ರದರ್‌ಹುಡ್‌ಗೆ ಸೇರಿದ ಮುಹಮ್ಮದ್ ಮುರ್ಸಿಯನ್ನು ಸೇನೆಯು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿರುವುದನ್ನು ಪ್ರತಿಭಟಿಸಿ ಮುಸ್ಲಿಮ್ ಬ್ರದರ್‌ಹುಡ್ ಪ್ರತಿಭಟನೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News