ಅಮೆರಿಕ ಅಧಿಕಾರಿಯೊಂದಿಗೆ ಮಾತುಕತೆ: ತಾಲಿಬಾನ್

Update: 2018-07-28 18:06 GMT

ಇಸ್ಲಾಮಾಬಾದ್, ಜು. 28: ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ತಾಲಿಬಾನ್ ಅಮೆರಿಕದ ಅಧಿಕಾರಿಯೊಬ್ಬರೊಂದಿಗೆ ಮೊದಲ ಪ್ರಾಥಮಿಕ ಮಾತುಕತೆ ನಡೆಸಿದೆ ಎಂದು ಹಿರಿಯ ತಾಲಿಬಾನ್ ನಾಯಕನೊಬ್ಬ ಹೇಳಿದ್ದಾನೆ.

 ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸುದೀರ್ಘ ಉಪಸ್ಥಿತಿಯನ್ನು ಕೊನೆಗೊಳಿಸುವ ಪ್ರಯತ್ನವಾಗಿ ದಕ್ಷಿಣ ಏಶ್ಯಕ್ಕೆ ಅಮೆರಿಕದ ಹಿರಿಯ ರಾಜತಾಂತ್ರಿಕರಾಗಿರುವ ಆಲಿಸ್ ವೆಲ್ಸ್ ಜೊತೆ ಈ ವಾರ ಮಾತುಕತೆ ನಡೆಸಲಾಯಿತು ಎಂದು ತಾಲಿಬಾನ್ ನಾಯಕ ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News