×
Ad

ಸೌದಿ: ಭಾರೀ ಪ್ರಮಾಣದಲ್ಲಿ ಅಮಲು ಮಾತ್ರೆಗಳ ಸಾಗಣೆ ಯತ್ನ ವಿಫಲ

Update: 2018-07-28 23:39 IST

ರಿಯಾದ್, ಜು. 28: ಭಾರೀ ಪ್ರಮಾಣದಲ್ಲಿ ಫೆನೆತಿಲೀನ್ ಮಾತ್ರೆಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವೊಂದನ್ನು ಸೌದಿ ಅರೇಬಿಯದ ಯಾಂಬು ಪ್ರಾಂತದ ಪ್ರಿನ್ಸ್ ಅಬ್ದುಲ್‌ಮುಹ್ಸಿನ್ ಬಿನ್ ಅಬ್ದುಲಝೀಝ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.

17,300ಕ್ಕೂ ಅಧಿಕ ಮಾತ್ರೆಗಳನ್ನು ಪ್ರಯಾಣಿಕರ ಚೀಲಗಳಲ್ಲಿ ಅಡಗಿಸಿ ದೇಶದ ಒಳಗೆ ಸಾಗಿಸಲಾಗುತ್ತಿತ್ತು ಎಂದು ಕಸ್ಟಮ್ಸ್ ನಿರ್ದೇಶಕ ಜನಲರ್ ಅಲಾ ನಹ್ಹಸ್ ತಿಳಿಸಿದರು.

ಈ ಮಾತ್ರೆಗಳನ್ನು ಅಮಲಿಗಾಗಿ ಸೇವನೆ ಮಾಡಲಾಗುತ್ತಿದೆ.

ಪ್ರಯಾಣಿಕರೊಬ್ಬರ ಚೀಲದ ಕೆಳಭಾಗದಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಈ ಮಾತ್ರೆಗಳನ್ನು ಅಡಗಿಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News