ಬೆಳಗ್ಗೆ ನಗ್ನರಾಗಿ, ನೋವಿನಿಂದ ಏಳುತ್ತಿದ್ದೆವು

Update: 2018-07-29 17:42 GMT

ಮುಝಾಪ್ಫರ್‌ಪುರ್, ಜು. 29: ‘‘ನಮಗೆ ಮಾದದ ದ್ರವ್ಯವನ್ನು ಆಹಾರದಲ್ಲಿ ನೀಡಲಾಗುತ್ತಿತ್ತು. ಅತ್ಯಾಚಾರ ಎಸಗಲಾಗುತ್ತಿತ್ತು ಹಾಗೂ ಬೆದರಿಕೆ ಒಡ್ಡಲಾಗುತ್ತಿತ್ತು. ಇದು ಪ್ರತಿ ರಾತ್ರಿ ನಡೆಯುತ್ತಿತ್ತು’’ ಎಂದು ಬಿಹಾರದ ಮುಝಾಫ್ಫರ್‌ಪುರ್‌ನ ನಿರಾಶ್ರಿತರ ಶಿಬಿರದಲ್ಲಿ ನರಕಯಾತನೆ ಅನುಭವಿಸಿದ ಬಾಲಕಿಯರು ಹೇಳಿದ್ದಾರೆ.

 ಎಲ್ಲ ಬಾಲಕಿಯರ ವೈದ್ಯಕೀಯ ವರದಿಗಳಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಉಪ ವಿಭಾಗೀಯ ದಂಡಾಧಿಕಾರಿ ಮುಂದೆ ಬಾಲಕಿಯರು ನೀಡಿದ ಹೇಳಿಕೆಯಲ್ಲಿ ಮುಝಾಫ್ಫರ್‌ಪುರ್ ಮಕ್ಕಳ ರಕ್ಷಣಾ ಅಧಿಕಾರಿ ರವಿ ಕುಮಾರ್ ರೋಷನ್ ಹಾಗೂ ಬ್ರಿಜೇಶ್ ಠಾಕೂರ್ ಅವರನ್ನು ಉಲ್ಲೇಖಿಸಿದ್ದಾರೆ. ಸರಕಾರೇತರ ಸಂಸ್ಥೆ ನಡೆಸುತ್ತಿದ್ದ ಈ ನಿರಾಶ್ರಿತರ ಶಿಬಿರವನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಹಾಗೂ ಎಲ್ಲ ಬಾಲಕಿಯರನ್ನು ಸಮೀಪ ಶಿಬಿರಕ್ಕೆ ವರ್ಗಾಯಿಸಲಾಗಿದೆ. ಸರಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದ ಬ್ರಿಜೇಶ್ ಠಾಕೂರ್ ಹಾಗೂ ರೋಷನ್‌ರನ್ನು ಬಂಧಿಸಲಾಗಿದೆ. ರವಿ ಕುಮಾರ್ ರೋಷನ್ ನನ್ನು ನಿರಂತರ ನಮ್ಮ ಶಿಬಿರಕ್ಕೆ ಆಗಮಿಸುತ್ತಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ‘‘ಚಂದಾ ಆಂಟಿ ನನ್ನನ್ನು ಅವರಲ್ಲಿಗೆ ಕೊಂಡೊಯ್ದರು. ಆಂಟಿ ನನಗೆ ಮಾತ್ರೆ ನೀಡಿದ್ದರು. ಮಾತ್ರೆ ಕುಡಿದ ಕೂಡಲೇ ನಾನು ಪ್ರಜ್ಞೆ ಕಳೆದುಕೊಂಡೆ. ಬೆಳಗ್ಗೆ ಏಳುವಾಗ ನಾನು ನಗ್ನಳಾಗಿದ್ದೆ. ದೇಹವೆಲ್ಲ ನೋವಿನಿಂದ ಕೂಡಿತ್ತು. ರೋಷನ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ’’ ಎಂದು ಬಾಲಕಿಯೊಬ್ಬಳು ಹೇಳಿದ್ದಾಳೆ. ನಿರಾಶ್ರಿತರ ಶಿಬಿರದಲ್ಲಿರುವ ಒಂದು ಕೊಠಡಿಯಲ್ಲಿ ರೋಷನ್ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ‘‘ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ.’’ ಎಂದು ಇನ್ನೊಂದು ಕೊಠಡಿಯ ಕಿಟಕಿಯಿಂದ ಘಟನೆಯನ್ನು ವೀಕ್ಷಿಸಿದ್ದ ಬಾಲಕಿಯೋರ್ವಳು ತಿಳಿಸಿದ್ದಾಳೆ. ಇನ್ನೊಂದು ಘಟನೆಯಲ್ಲಿ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ ಬಾಲಕಿಯೊಬ್ಬಳು ಮೇಲೆ ರೋಷನ್ ಹಲ್ಲೆಗೈದಿದ್ದಾನೆ. ‘‘ಆತ ನನಗೆ ಪರಚಿದ.’’ ಎಂದು ಹೇಳಿರುವ ಬಾಲಕಿ, ರೋಷನ್ ಆಗಾಗ ಸಾರಾಯಿ ತರುತ್ತಿದ್ದ ಹಾಗೂ ಕುಡಿಯುವಂತೆ ನಮಗೆ ಒತ್ತಾಯಿಸುತ್ತಿದ್ದ ಎಂದಿದ್ದಾಳೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದಾಗ ಮೂಕಿ ಬಾಲಕಿಯೋರ್ವಳು ರೋಷನ್ ಫೋಟೊದತ್ತ ಕೈತೋರಿಸಿದ್ದಾಳೆ. ಇನ್ನೋರ್ವ ಬಾಲಕಿಯನ್ನು ರೋಷನ್ ಅಡುಗೆ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ಚಾಕು ವಿನೊಂದಿಗೆ ಆಗಮಿಸಿದ್ದ ಆತ ಬಾಲಕಿಯ ಕೈಗೆ ಗಾಯಗೊಳಿಸಿದ್ದಾನೆ. ‘‘ರೋಷನ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ.’’ ಎಂದು ಆ ಬಾಲಕಿ ಹೇಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News