ಯುಎಇಯಲ್ಲಿ ಒಂದು ವರ್ಷದಲ್ಲಿ 1,800 ಹೊಸ ಕೋಟ್ಯಧಿಪತಿಗಳು

Update: 2018-07-29 18:02 GMT

ದುಬೈ, ಜು.29: ಜಾಗತಿಕವಾಗಿ ಆರ್ಥಿಕತೆ ಇಳಿಮುಖವಾಗಿದ್ದರೂ ಯುಎಇಯ ಜನತೆ ತಮ್ಮ ಸಂಪತ್ತನ್ನು ವೃದ್ಧಿಸುತ್ತಲೇ ಸಾಗಿದ್ದಾರೆ. ಕಳೆದ ಒಂದು ವರ್ಷದಲ್ಲೇ ದೇಶದ ಕೋಟ್ಯಾಧಿಪತಿಗಳ ಸಾಲಿಗೆ ಸಾವಿರಕ್ಕೂ ಅಧಿಕ ಜನರು ಸೇರಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಒದಗಿಸಿರುವ ಹೊಸ ಅಂಕಿಅಂಶಗಳ ಪ್ರಕಾರ, 2017ರಲ್ಲಿ ಯುಎಇಯಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ 18,200ರಿಂದ 20,000ಕ್ಕೆ ಜಿಗಿದಿದೆ. ಆಮೂಲಕ ದೇಶದ ಶ್ರೀಮಂತರ ಪ್ರಮಾಣದಲ್ಲಿ ಶೇ. 10 ಏರಿಕೆಯಾಗಿದೆ. ಅದರರ್ಥ ಹನ್ನೆರಡು ತಿಂಗಳಲ್ಲಿ 1,800 ಮಂದಿ ಯುಎಇಯಲ್ಲಿ ಹೊಸ ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ. 2017ರಲ್ಲಿ ಒಟ್ಟಾರೆ ಹೂಡಿಕೆ ಮಾಡಬಹುದಾದ ಸಂಪತ್ತು 3,113 ಬಿಲಿಯನ್ ಡಾಲರ್ ತಲುಪಿದ್ದು, 2022ರ ವೇಳೆಗೆ ಈ ಮೊತ್ತ 4,865 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News