ನಕಲಿ ಎನ್ ಕೌಂಟರ್ ಗಳನ್ನು ಬಹಿರಂಗಪಡಿಸಿದ್ದರಿಂದ ಕುಟುಂಬ ಸದಸ್ಯರ ಜೀವ ಅಪಾಯದಲ್ಲಿದೆ: ಸೇನಾಧಿಕಾರಿಯ ಆರೋಪ

Update: 2018-07-30 08:08 GMT

ಹೊಸದಿಲ್ಲಿ, ಜು.30:  ಈಶಾನ್ಯ ಭಾರತದಲ್ಲಿರುವ ಸೇನೆಯ ಗುಪ್ತಚರ ಸರ್ವೇಕ್ಷಣಾ ಘಟಕದಲ್ಲಿನ  ನಕಲಿ ಎನ್ ಕೌಂಟರ್ ಗಳು ಹಾಗೂ ಅಕ್ರಮ ವಸೂಲಿ ಬಗ್ಗೆ ತಾನು ದನಿಯೆತ್ತಿರುವುದಕ್ಕಾಗಿ ತನ್ನ ಹಾಗೂ ಕುಟುಂಬ ಸದಸ್ಯರ ಜೀವ ಅಪಾಯದಲ್ಲಿದೆ ಎಂದು ಮಣಿಪುರದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಧರಂವೀರ್ ಸಿಂಗ್ ಆರೋಪಿಸಿದ್ದಾರೆ.

ಜುಲೈ 1ರಂದು ಅವರ ಇಂಫಾಲ್ ಮನೆಯಿಂದ ಇಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ಬಂಧಿಸಲಾಗಿತ್ತು.  ಅವರ ಪತ್ನಿ ರಂಜು ಸಿಂಗ್ ಈ ಬಗ್ಗೆ ದೂರು ನೀಡಿದ  ನಂತರ ಕರ್ನಲ್ ಅವರು ಜುಲೈ 5ರಂದು ಧಿಮಾಪುರದಲ್ಲಿ ಪ್ರತ್ಯಕ್ಷರಾಗಿದ್ದರು.

ಜುಲೈ 20ರಂದು ಇಂಫಾಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅಫಿದಾವತ್ತಿನಲ್ಲಿ  52 ವರ್ಷದ ಸಿಂಗ್ ತಾನು ನಕಲಿ ಎನ್ ಕೌಂಟರ್ ಗಳ  ಹಾಗೂ ಅಕ್ರಮ ವಸೂಲಿಯ ಬಗ್ಗೆ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ಬರೆದಿದ್ದರೂ  ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿ ನಂತರ  ಪತ್ರ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗಿತ್ತು ಎಂದಿದ್ದಾರೆ.

ತಮ್ಮ ಬಂಧನವೂ ಇದೇ ಒತ್ತಡ ತಂತ್ರಗಾರಿಕೆಯ ಭಾಗವಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ತಮ್ಮ ಪತ್ರದಲ್ಲಿ ಅವರು ಮಾರ್ಚ್ 10, 2010, ಫೆಬ್ರವರಿ 5, 2010 ಹಾಗೂ ಆಗಸ್ಟ್ 19, 2011ರಂದು ನಕಲಿ ಎನ್‍ಕೌಂಟರ್ ಗಳು ನಡೆದಿದ್ದವು ಎಂದು ದೂರಿದ್ದರು.

ಈ ಆರೋಪಗಳು ಒಮ್ಮೆ ಗುವಾಹಟಿ  ಹೈಕೋರ್ಟಿನ ಮುಂದೆ ಬಂದಿದ್ದರೂ ಅವುಗಳು  ಸತ್ಯಕ್ಕೆ ದೂರವಾಗಿವೆ ಎಂದು ನ್ಯಾಯಾಲಯ ಕಂಡುಕೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News