ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಬೇಕು?

Update: 2018-07-31 07:08 GMT

ಹೊಸದಿಲ್ಲಿ, ಜು.31: ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ  ಉಲ್ಲೇಖಿಸಬೇಕಾದ ವಿಚಾರಗಳ ಬಗ್ಗೆ ಜನರು ತಮ್ಮ ಅನಿಸಿಕೆಗಳು  ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ವಿನಂತಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ತಮ್ಮ ನರೇಂದ್ರ ಮೋದಿ ಆ್ಯಪ್  ಅಥವಾ ಮೈಗವ್ ಆ್ಯಪ್ ಬಳಸಿ ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದೆಂದು ತಿಳಿಸಿದ್ದಾರೆ. “ನಿಮ್ಮ ಅರ್ಥಪೂರ್ಣ ಅನಿಸಿಕೆಗಳನ್ನು ತಿಳಿಯಲು ನಾನು ಕಾತುರನಾಗಿದ್ದೇನೆ'' ಎಂದೂ ಪ್ರಧಾನಿಯ ಟ್ವೀಟ್ ತಿಳಿಸಿದೆ.

ಪ್ರಧಾನಿಯ ಟ್ವೀಟ್ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ನೂರಾರು ಕಮೆಂಟ್ ಗಳು  ಪ್ರಧಾನಿ ಮೋದಿಯ ವೆಬ್ ಸೈಟ್ ಹಾಗೂ ಆ್ಯಪ್ ಗಳಲ್ಲಿ ಕಾಣಿಸಿಕೊಂಡಿವೆ.

ಈ ಬಾರಿ ಪ್ರಧಾನಿ ಮೋದಿ ಐತಿಹಾಸಿಕ ಕೆಂಪು ಕೋಟೆಯಿಂದ ತಮ್ಮ 5ನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯಂತ ಚಿಕ್ಕದಾದ ಸ್ವಾತಂತ್ರ್ಯ ದಿನ ಭಾಷಣ ನೀಡಿದ್ದರಲ್ಲದೆ ಒಂದು ಗಂಟೆ ಅವಧಿಗಿಂತಲೂ ಮುನ್ನ ತಮ್ಮ ಭಾಷಣ ಪೂರ್ತಿಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News