ಸತತ 23 ಗಂಟೆಗಳ ಕಾರ್ಯಾಚರಣೆ: ಕೊಳವೆಬಾವಿಗೆ ಬಿದ್ದ ಬಾಲಕಿಯ ರಕ್ಷಣೆ

Update: 2018-08-01 17:02 GMT

ಬಿಹಾರ, ಆ.1: 110 ಅಡಿ ಆಳದ ತೆರೆದ ಕೊಳವೆಬಾವಿಯೊಂದಕ್ಕೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಸತತ 23 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಬಿಹಾರದ ಮುಂಗೆರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.

ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಬಿದ್ದ 3 ವರ್ಷದ ಬಾಲಕಿ ಸನ್ನೋ ಕೊಳವೆಬಾವಿಗೆ ಬಿದ್ದಿದ್ದಳು. ಕೂಡಲೇ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ಧಾವಿಸಿತ್ತು. ಬಾಲಕಿಗೆ ಆಮ್ಲಜನಕವನ್ನೂ ಒದಗಿಸಲಾಗಿತ್ತು. ಸತತ 23 ಗಂಟೆಗಳ ಕಾರ್ಯಾಚರಣೆ ನಂತರ ಬಾಲಕಿಯನ್ನು ಕೊಳವೆಬಾವಿಯಿಂದ ಹೊರ ತೆಗೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News