ಜುಲೈಯಲ್ಲಿ 96,483 ಕೋ. ರೂ. ಜಿಎಸ್‌ಟಿ ಸಂಗ್ರಹ

Update: 2018-08-01 17:19 GMT

 ಹೊಸದಿಲ್ಲಿ, ಆ. 1: ಜುಲೈಯಲ್ಲಿ ಜಿಎಸ್‌ಟಿ ಸಂಗ್ರಹ 96,483 ಕೋಟಿ ರೂ.ಗೆ ಏರಿಕೆಯಾಗಿದೆ. ಜೂನ್‌ನಲ್ಲಿ ಜಿಎಸ್‌ಟಿ ಸಂಗ್ರಹ 95.610 ಕೋಟಿ ರೂ. ಸಂಗ್ರಹ ಆಗಿತ್ತು. ಇ-ವೇ ಬಿಲ್ ಅನುಷ್ಠಾನದ ಬಳಿಕ ಜಿಎಸ್‌ಟಿ ಸಂಗ್ರಹಣೆಯಲ್ಲಿ ಈ ಸುಧಾರಣೆ ಉಂಟಾಗಿದೆ.

 ಕಳೆದ ತಿಂಗಳು 66 ಲಕ್ಷ ಉದ್ಯಮಗಳು ತೆರಿಗೆ ರಿಟರ್ನ್ಸ್ ಸಲ್ಲಿಸಿವೆ. ಕಳೆದ ವರ್ಷ ಜುಲೈಯಲ್ಲಿ ಜಿಎಸ್‌ಟಿ ಅನುಷ್ಠಾನಗೊಳಿಸಿದ ಬಳಿಕ ತಿಂಗಳೊಂದರಲ್ಲಿ ಅತ್ಯಧಿಕ ಜಿಎಸ್‌ಟಿಆರ್-3ಬಿ ಸಲ್ಲಿಸಿರುವುದು ಇದೇ ಮೊದಲು. 2018 ಜುಲೈಯಲ್ಲಿ ಸಂಗ್ರಹವಾಗಿರುವ ಒಟ್ಟು ಜಿಎಸ್‌ಟಿ ಆದಾಯ 96,483 ಕೋಟಿ ರೂ. ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಪ್ರಸಕ್ತ ವಿತ್ತ ವರ್ಷದಲ್ಲಿ ತಿಂಗಳಲ್ಲಿ ಜಿಎಸ್‌ಟಿಯಿಂದ ಸಂಗ್ರಹವಾದ ಆದಾಯ ಎಪ್ರಿಲ್‌ನಲ್ಲಿ 1.03 ಲಕ್ಷ ಕೋಟಿ ರೂ., ಮೇಯಲ್ಲಿ 94,016 ಕೋಟಿ ರೂ. ಹಾಗೂ ಜೂನ್‌ನಲ್ಲಿ 95,610 ಕೋಟಿ ರೂ. ತೆರಿಗೆ ರಿಟರ್ನ್ಸ್ ಎಪ್ರಿಲ್‌ನಲ್ಲಿ 60,47 ಲಕ್ಷ, ಮೇಯಲ್ಲಿ 62.47 ಲಕ್ಷ ಹಾಗೂ ಜೂನ್‌ನಲ್ಲಿ 64,69 ಲಕ್ಷ ಸಲ್ಲಿಕೆಯಾಗಿದೆ.

 ಜಿಎಸ್‌ಟಿ ಪ್ರಮುಖ ಸಾಧನವಾದ ಇ-ವೇ ಬಿಲ್ ಅನುಷ್ಠಾನಗೊಳಿಸಿದ ಬಳಿಕ ಜಿಎಸ್‌ಟಿ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News