ಡೆನ್ಮಾರ್ಕ್‌ನಲ್ಲಿ ಬುರ್ಖಾ ನಿಷೇಧ

Update: 2018-08-02 13:58 GMT

ಕೋಪನ್‌ಹೇಗನ್ (ಡೆನ್ಮಾರ್ಕ್), ಆ. 2: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸುವ ವಿವಾದಾಸ್ಪದ ಕಾನೂನು ಡೆನ್ಮಾರ್ಕ್‌ನಲ್ಲಿ ಬುಧವಾರ ಜಾರಿಗೆ ಬಂದಿದೆ. ನೂತನ ಕಾನೂನಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಬುರ್ಖಾ ಧರಿಸಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ.

ಆದರೆ, ಈ ಕಾನೂನಿನ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

ಬುರ್ಖಾ ನಿಷೇಧವು ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದಾಗಿ ಮಾನವಹಕ್ಕುಗಳ ಹೋರಾಟಗಾರರು ಟೀಕಿಸಿದ್ದಾರೆ. ಅದೇ ವೇಳೆ, ಮುಸ್ಲಿಮ್ ವಲಸಿಗರು ಡ್ಯಾನಿಶ್ ಸಮಾಜದೊಂದಿಗೆ ಬೆರೆಯಲು ಈ ನಿಷೇಧವು ಸಹಕಾರಿಯಾಗಲಿದೆ ಎಂದು ನಿಷೇಧದ ಪರವಾಗಿರುವವರು ವಾದಿಸಿದ್ದಾರೆ.

ಬುರ್ಖಾ ನಿಷೇಧದ ವಿರುದ್ಧ ರಾಜಧಾನಿ ಕೋಪನ್‌ಹೇಗನ್ ಮತ್ತು ದೇಶದ ಎರಡನೇ ಅತಿ ದೊಡ್ಡ ನಗರ ಆರ್ಹಸ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬುರ್ಖಾ ಧರಿಸಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News