ಸೂಪರ್ ಸೋನಿಕ್ ಪ್ರತಿಬಂಧಕ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Update: 2018-08-02 17:56 GMT
ಸಾಂದರ್ಭಿಕ ಚಿತ್ರ

ಬಾಲಸೋರ್, ಆ. 2: ಕೆಲವು ಸುಧಾರಿತ ಲಕ್ಷಣಗಳನ್ನು ಸಂಯೋಜಿಸಲು ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಸೂಪರ್ ಸಾನಿಕ್ ಪ್ರತಿಬಂಧಕ ಕ್ಷಿಪಣಿಯನ್ನು ಒರಿಸ್ಸಾದ ಕರಾವಾಳಿಯ ಪರೀಕ್ಷಾ ವಲಯದಿಂದ ಗುರುವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಈ ಸುಧಾರಿತ ವಾಯು ರಕ್ಷಣಾ ಪ್ರತಿಬಂಧಕ ಕ್ಷಿಪಣಿಗೆ ಇನ್ನಷ್ಟೇ ಹೆಸರು ಇರಿಸಬೇಕಿದೆ. ಈ ಕ್ಷಿಪಣಿಯನ್ನು ಡಾ. ಅಬ್ದುಲ್ ಕಲಾಂ ಐಲ್ಯಾಂಡ್‌ನ ಸಮಗ್ರ ಪರೀಕ್ಷಾ ವಲಯದಿಂದ ಪೂರ್ವಾಹ್ನ 11.24ಕ್ಕೆ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಪಥದಲ್ಲಿ ಸಾಗಿದ ಕ್ಷಿಪಣಿ ಸಮುದ್ರದ ಮೇಲೆ ಆಕಾಶದಲ್ಲಿರುವ ಗುರಿಯನ್ನು ಹೊಡೆದುರುಳಿಸಿತು ಎಂದು ಮೂಲಗಳು ತಿಳಿಸಿವೆ. ಬಹುಪದರದ ಪ್ರಕ್ಷೇಪಕ ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆ ರೂಪಿಸುವುದರ ಒಂದು ಭಾಗವಾಗಿ ಈ ಕ್ಷಿಪಣಿ ಅಭಿವೃದ್ಧಿಗೊಳಿಸಲಾಗಿದೆ. ಇದು ದಾಳಿ ನಡೆಸುವ ಪ್ರಕ್ಷೇಪ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ನಡೆಸಿದ ಪರೀಕ್ಷೆಯಲ್ಲಿ ಗುರಿ ಹೊಡೆದುರುಳಿಸುವುದು ಸೇರಿದಂತೆ ಕಾರ್ಯನಿರ್ವಹಣೆಯ ಪ್ರಮುಖ ಮಾನದಂಡಗಳ ಪರೀಕ್ಷೆಯಲ್ಲಿ ಈ ಕ್ಷಿಪಣಿ ಯಶಸ್ವಿಯಾಗಿದೆ. ಪ್ರಸಕ್ತ ಪರೀಕ್ಷೆ ಕ್ಷಿಪಣಿ ವ್ಯವಸ್ಥೆಯಲ್ಲಿ ಕೆಲವು ಸುಧಾರಿತ ಲಕ್ಷಣಗಳನ್ನು ಸಂಯೋಜಿಸುವ ಉದ್ದೇಶ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News