ಮಹಾರಾಷ್ಟ್ರ: ಗರ್ಭಿಣಿಯ ಸಾಮೂಹಿಕ ಅತ್ಯಾಚಾರ

Update: 2018-08-03 12:13 GMT

 ಮುಂಬೈ,ಆ.3: ಎಂಟು ತಿಂಗಳ ಗರ್ಭಿಣಿ ಯುವತಿಯನ್ನು ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ  ನಡೆದಿದೆ.  ಹೊಟೇಲ್ ಉದ್ಯಮಿ ಪತಿಯೊಂದಿಗೆ ಯುವತಿ ಟಾಸ್‍ಗನ್‍ನ ತುರಚ್ಚಿ  ಫಾಟ್ಟ ಎಂಬಲ್ಲಿಗೆ ಬಂದಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ. 

ಹೊಟೆಲ್ ಕೆಲಸಗಾರರಿಗಾಗಿ  ಯುವತಿ ಮತ್ತು ಪತಿ ತುರಚ್ಚಿ  ಫಾಟ್ಟಕ್ಕೆ ಬಂದಿದ್ದರು. ಆರೋಪಿಗಳಲ್ಲಿ ಒಬ್ಬನಾದ ಮುಕುಂದ ಮಾನೆ ಕೆಲಸಗಾರರನ್ನು ಸರಬರಾಜು ಮಾಡುತ್ತೇನೆ ಎಂದು ಇವರಿಗೆ ತಿಳಿಸಿದ್ದನು. ಇದಕ್ಕಾಗಿ ಆತ 20,000ರೂಪಾಯಿ ಇವರಿಂದ ಪಡೆದುಕೊಂಡಿದ್ದನು. ತುರಚ್ಚಿ  ಫಾಟ್ಟಕ್ಕೆ ತಲುಪಿದ ನಂತರ ದಂಪತಿಯನ್ನು ಈತ  ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ,  ಪತಿಗೆ ಹಲ್ಲೆಎಸಗಿ ಗಾಯಗೊಳಿಸಿದ ಬಳಿಕ ಗೆಳೆಯರೊಂದಿಗೆ ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆಂದು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News