×
Ad

ಗೋವಾದಲ್ಲಿ ಮಾದಕ ದ್ರವ್ಯಗಳು ತಯಾರಾಗುವುದಿಲ್ಲ, ಆದರೆ ಕಳ್ಳಸಾಗಣೆ ನಡೆಯುತ್ತಿದೆ:ಪಾರಿಕ್ಕರ್

Update: 2018-08-03 23:13 IST

ಪಣಜಿ,ಆ.3: ಗೋವಾದಲ್ಲಿ ಮಾದಕ ದ್ರವ್ಯಗಳನ್ನು ತಯಾರಿಸಲಾಗುವುದಿಲ್ಲ,ಆದರೆ ಕಳ್ಳಸಾಗಣೆ ಚಟುವಟಿಕೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರೋರ್ವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.

ಗೋವಾದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಚಟುವಟಿಕೆಗಳು ಭರದಿಂದ ಹೆಚ್ಚುತ್ತಿವೆ ಎನ್ನುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರತಿಪಕ್ಷ ನಾಯಕ ಚಂದ್ರಕಾಂತ ಕವಳೇಕರ ಪ್ರಶ್ನೆಗೆ ಉತ್ತರಿಸಿದ ಅವರು,ಗೋವಾ ಪ್ರವಾಸೋದ್ಯಮ ಕೇಂದ್ರವಾಗಿರುವುದಿಂದ ಕೆಲವು ಮಾದಕ ದ್ರವ್ಯ ಕಳ್ಳಸಾಗಣೆ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಕಳ್ಳ ಸಾಗಣೆದಾರರು ಮತ್ತು ಮಾರಾಟಗಾರರ ಮುಖ್ಯ ಗುರಿ ಪ್ರವಾಸಿಗಳಾಗಿದ್ದಾರೆ. ಕೆಲವು ಸ್ಥಳೀಯರು ಮತ್ತು ಪ್ರವಾಸಿಗಳು ಸಹ ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಯಾವಾಗಲೂ ಸಮಾಜಕ್ಕೆ ಅಪಾಯಕಾರಿಯಾಗಿದೆ ಎಂದ ಪಾರಿಕ್ಕರ್,ತನ್ನ ಸರಕಾರವು ಮಾದಕ ದ್ರವ್ಯ ಕಳ್ಳಸಾಗಣೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News