ಸ್ವದೇಶಿ 'ಲಿಂಗ ಆಯ್ಕೆ' ಔಷಧಿ ತಯಾರಿಕೆಗಳ ಕರಾಳ ಮುಖ

Update: 2018-08-04 09:26 GMT

ಸ್ವದೇಶಿ ಔಷಧಿಗಳಲ್ಲಿ ಹೆವಿ ಮೆಟಲ್‌ಗಳಿರುವುದಷ್ಟೇ ಆತಂಕದ ವಿಷಯವಲ್ಲ. ಇದೇ ಅಧ್ಯಯನ ತಂಡ ಈ ಮೊದಲು ನಡೆೆಸಿದ ಒಂದು ಅಧ್ಯಯನದ ಪ್ರಕಾರ, ಈ ಔಷಧಿಗಳಲ್ಲಿ ಫೈಟೋಎಸ್ಟ್ರೊಜನ್ ಎಂಬ ರಾಸಾಯನಿಕಗಳಿರುವುದು ಕೂಡ ತಿಳಿದು ಬಂದಿತ್ತು. ಇವುಗಳು ಗರ್ಭಿಣಿಯರಲ್ಲಿ ಹಾರ್ಮೋನ್‌ಗಳ ಏರಿಳಿತಕ್ಕೆ ಕಾರಣವಾಗಬಲ್ಲವು. ಪರಿಣಾಮವಾಗಿ ಮುಂದಕ್ಕೆ ಬಂಜೆತನವೂ ಬರಬಹುದಾಗಿದೆ.

ರಾಸಾಯನಿಕವಾಗಿ ವ್ಯಾಖ್ಯಾನಿಸಲಾದ ಮಿಶ್ರಣಗಳನ್ನು ಬಳಸಿ ತಯಾರಿಸಲಾಗುವ ಔಷಧಿಗಳನ್ನು ಭಾರತದಲ್ಲಿ ನಿಯಂತ್ರಣಕ್ಕೊಳಪಡಿಸಲಾಗುತ್ತದೆಯಾದರೂ ನಂಬಿಕೆ ಮತ್ತು ಆಸೆಯ ನೆಲೆಯಲ್ಲಿ ಸಾಂಪ್ರದಾಯಕ/ದೇಶೀಯ ಔಷಧಿಗಳು ಯಾವುದೇ ನಿಯಂತ್ರಣಕ್ಕೊಳಪಡದೆ ಸರಾಗವಾಗಿ ಬಿಕರಿಯಾಗುತ್ತವೆ.

ಭಾರತದ ಬಡವರ್ಗವನ್ನು ಗುರಿಯಾಗಿರಿಸಿಕೊಂಡಿರುವ ಈ ಸ್ವದೇಶಿ ತಯಾರಿಕೆಗಳು, ಇಂಡಿಜಿನಸ್ ಪ್ರಿಪರೇಶನ್ಸ್(ಐಪಿ) ದೇಶದ ಪರ್ಯಾಯ ಆರೋಗ್ಯ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ಈ ಔಷಧಿಗಳು ಬಹಳ ಸಂದರ್ಭದಲ್ಲಿ ಅನೈತಿಕ ಉದ್ದೇಶಗಳಿಗೆ ಬಳಕೆಯಾಗುತ್ತಿವೆ ಮತ್ತು ಸಾಮಾಜಿಕ ಅನಿಷ್ಠಗಳ ವಿರುದ್ಧ ನಾವು ಬಹಳ ಸಮಯದಿಂದ ಹೂಡಿರುವ ಸಮರಕ್ಕೆ ಬಲವಾದ ಒಂದು ಹೊಡೆತ ನೀಡುತ್ತವೆೆ.
ಇದಕ್ಕೊಂದು ಅತ್ಯುತ್ತಮ ಉದಾಹರಣೆ, ಗಂಡುಮಗು ಬೇಕೆಂಬ ಕಾರಣಕ್ಕಾಗಿ ಗರ್ಭಿಣಿಯರು ತೆಗೆದುಕೊಳ್ಳುವ ಸ್ವದೇಶಿ ಲಿಂಗ ಆಯ್ಕೆ ಔಷಧಿಗಳು. ಬಸಿರು-ಪೂರ್ವ ಮತ್ತು ಹೆರಿಗೆ-ಪೂರ್ವ ತಂತ್ರಗಳ ಕಾಯ್ದೆ ಸುಮಾರು 24 ವರ್ಷಗಳಿಂದ ಅಸ್ತಿತ್ವದಲ್ಲಿದೆಯಾದರೂ ದೇಶವು ಇನ್ನೂ ಕೂಡ ಲಿಂಗ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಇದು ನವಜಾತ ಶಿಶುಗಳ ಹಾಗೂ ತಾಯಂದಿರ ಆರೆಗ್ಯಕ್ಕೆ ಅಪಾಯ ತಂದೊಡ್ಡುತ್ತದೆ.
 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ದಿಲ್ಲಿ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸುತಾಪಾ ಬಂದೋಪಾಧ್ಯಾಯ ನಿಯೋಗಿ ಮತ್ತು ಅವರ ತಂಡ ಹರ್ಯಾಣ ದಲ್ಲಿ ಜನನ ವಿಕೃತಿಗಳ ಕಾರಣ ಗಳೇನು? ಎಂದು ಕಂಡು ಹಿಡಿಯಲು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ. ಗರ್ಭಿಣಿಯಾಗಿರುವಾಗ ಗಂಡು ಮಗುವಾಗಬೇಕೆಂದು ಮಹಿಳೆಯರು ಲಿಂಗ ಆಯ್ಕೆ ಔಷಧಿಗಳನ್ನು ಸೇವಿಸುವುದೇ ಶೇ. 25 ಮಕ್ಕಳು ಮೂಳೆ ಸಂಬಂಧಿ ವಿಕೃತಿಗಳೊಂದಿಗೆ ಜನಿಸಲು ಕಾರಣವೆಂದು ಅಧ್ಯಯನದಿಂದ ತಿಳಿದುಬಂತು.


ಗರ್ಭಿಣಿಯರು ಭಾರವಾದ ಲೋಹ(ಹೆವಿ ಮೆಟಲ್)ಗಳಿಗೆ ಗುರಿಯಾಗುವುದು ಬಹುದೊಡ್ಡ ಆತಂಕದ ವಿಷಯವಾಗಿದೆ. ಸ್ವದೇಶಿ ಔಷಧಿಗಳಲ್ಲಿ ಸೀಸದ ಪ್ರಮಾಣವು ಅಗತ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಇರುತ್ತದೆ ಮತ್ತು ಪಾದರಸವು 400 ಪಟ್ಟು ಅಧಿಕವಾಗಿರುತ್ತದೆ. ಹೆವಿ ಮೆಟಲ್‌ಗಳ ಈ ಮಟ್ಟಗಳು ಗರ್ಭಕೊಶದ ಹೊದಿಕೆಗೆ ಹಾನಿ ಮಾಡಿ ಬೆಳೆಯುತ್ತಿುವ ಭ್ರೂಣಕ್ಕೆ ಹಾನಿ ಮಾಡಬಲ್ಲವು.
ಸಂಶೋಧಕರ ತಂಡವು ಮೂರು ಸಾಂಪ್ರದಾಯಿಕ ಔಷಧಿಗಳಲ್ಲಿ ಗಾಬರಿ ಹುಟ್ಟಿಸುವ ಮಟ್ಟದಲ್ಲಿ ಸೀಸ ಮತ್ತು ಪಾದರಸ ಇರುವುದನ್ನು ಪತ್ತೆಹಚ್ಚಿತು. ಶಿವಲಿಂಗಿ, ಮಾಜುಫಲ್ ಅಥವಾ ನಾಗಕೇಸರ ಇರುವ ಔಷಧಿಗಳಲ್ಲಿ ಈ ಲೋಹಗಳು ಪತ್ತೆಯಾದವು. ಹರ್ಯಾಣದಲ್ಲಿ ಸ್ತ್ರೀ ಮತ್ತು ಪುರುಷರ ದಾಮಾಶಯ 832:1000 ಇದೆ (ರಾಷ್ಟ್ರೀಯ ಸರಾಸರಿ 898: 1000)

ಸ್ವದೇಶಿ ಔಷಧಿಗಳಲ್ಲಿ ಹೆವಿ ಮೆಟಲ್‌ಗಳಿರುವುದಷ್ಟೇ ಆತಂಕದ ವಿಷಯವಲ್ಲ. ಇದೇ ಅಧ್ಯಯನ ತಂಡ ಈ ಮೊದಲು ನಡೆೆಸಿದ ಒಂದು ಅಧ್ಯಯನದ ಪ್ರಕಾರ, ಈ ಔಷಧಿಗಳಲ್ಲಿ ಫೈಟೋಎಸ್ಟ್ರೊಜನ್ ಎಂಬ ರಾಸಾಯನಿಕಗಳಿರುವುದು ಕೂಡ ತಿಳಿದು ಬಂದಿತ್ತು. ಇವುಗಳು ಗರ್ಭಿಣಿಯರಲ್ಲಿ ಹಾರ್ಮೋನ್‌ಗಳ ಏರಿಳಿತಕ್ಕೆ ಕಾರಣವಾಗಬಲ್ಲವು. ಪರಿಣಾಮವಾಗಿ ಮುಂದಕ್ಕೆ ಬಂಜೆತನವೂ ಬರಬಹುದಾಗಿದೆ. ಜನಸಂಖ್ಯೆ ಆಧಾರಿತ ಅಧ್ಯಯನವೊಂದರಲ್ಲಿ ಇಂತಹ ಅಂಗ ಆಯ್ಕೆ ಔಷಧಿಗಳನ್ನು ಸೇವಿಸುವವರ ಶೈಕ್ಷಣಿಕ ಮಟ್ಟವನ್ನು ಪರಿಗಣಿಸಲಾಗಿತ್ತು. ಇಂತಹ ಔಷಧಿಗಳನ್ನು ಸೇವಿಸಿದ ಒಟ್ಟು ಸುಮಾರು ಶೇ. 40 ಮಂದಿ ತಾಯಂದಿರು ಪ್ರಾಥಮಿಕ ಶಿಕ್ಷಣ ಪಡೆದವರಾಗಿದ್ದರು, ತಂದೆಯಂದಿರು ದೈಹಿಕ ಕೂಲಿ ಕಾರ್ಮಿಕರಾಗಿದ್ದರು. ಸ್ವದೇಶಿ ಔಷಧಿಗಳನ್ನು ಸೇವಿಸಿದವರಲ್ಲಿ ಜನಿಸುವಾಗಲೇ ಅಂಗಹೀನ / ವಿಕೃತಾಂಗ ಮಕ್ಕಳು ಜನಿಸುವ ಅಪಾಯ ಮೂರು ಪಟ್ಟು ಹೆಚ್ಚು ಇರುವುದು ಕಂಡುಬಂತು. ಅಲ್ಲದೆ, ಅದಾಗಲೇ ಒಂದು ಹೆಣ್ಣು ಮಗು ಜನಿಸಿದ್ದರೆ, ಅಂತಹ ಮಗುವಿನ ತಾಯಂದಿರು ವಿಕೃತಾಂಗ ಮಕ್ಕಳನ್ನು ಹೆರುವ ಸಾಧ್ಯತೆ ಹೆಚ್ಚು.


ಇಂತಹ ಅಪಾಯಕಾರಿ ಔಷಧಿಗಳನ್ನು ಮಾರುವವರು ಜನರನ್ನು ತಪ್ಪುಹಾದಿಯಲ್ಲಿ ಸಾಗುವಂತೆ ಮಾಡುತ್ತಾರೆ. ಶಿವಲಿಂಗಿಯನ್ನು ‘ಪುತ್ರ್ ಜೀವಕ್’ (ಗಂಡುಮಗುವಿಗೆ ನೀಡುವ ಔಷಧಿ) ಎಂದು ವೆಬ್‌ಸೈಟ್‌ಗಳು ಜಾಹೀರಾತು ಮಾಡುತ್ತಿವೆ. ಶಿವಲಿಂಗಿಯನ್ನು ಲೈಂಗಿಕ ಶಕ್ತಿವರ್ಧಕ ಎಂದೂ ಜಾಹೀರಾತು ಮಾಡಲಾಗುತ್ತಿದೆ. ಗಂಡು ಇಲಿಗಳ ಮೇಲೆ ಪ್ರಯೋಗಿಸಿದಾಗ ಅದು ಟೆಸ್ಟೋಸ್ಟಿರೋನ್‌ಮಟ್ಟಗಳನ್ನು ಹೆಚ್ಚಿಸುವುದು ಕಂಡುಬಂತಾದರೂ, ಇದರಿಂದ ಅನುದ್ದೇಶಿತ ಪರಿಣಾಮಗಳೂ ಆಗಬಹುದು. ಉದಾಹರಣೆಗೆ, ಭ್ರೂಣದ ಸಂತಾನೋತ್ಪಾದಕ ಅಂಗಗಳ ಬೆಳವಣಿಗೆಗೆ ಇದು ಮಾರಕವಾಗಬಹುದು. ಆದ್ದರಿಂದ, ಪ್ರತಿಯೊಂದು ಸ್ವದೇಶಿ ಔಷಧಿಯಲ್ಲಿರುವ ಘಟಕದ ಶಾರೀರಿಕ ಪರಿಣಾಮವೇನೆಂದು ನಿರ್ಧರಿಸಲು ಇನ್ನಷ್ಟು ಸಂಶೋಧನೆ ನಡೆಯುವ ಅಗತ್ಯವಿದೆ.
ಮುಖ್ಯವಿಷಯವೆಂದರೆ ಯಾವುದೇ ಔಷಧಿಯಿಂದ, ಬೆಳೆಯುತ್ತಿರುವ ಭ್ರೂಣದ ಲಿಂಗವನ್ನು ಬದಲಿಸಲು ಸಾಧ್ಯವಿಲ್ಲ. ಸಂತಾನೋತ್ಪತ್ತಿಯಾಗುವ ವೇಳೆಯಲ್ಲೇ, ಫರ್ಟಿಲೈಜೇಶನ್ ಆಗುವಾಗಲೇ ಭ್ರೂಣದ ಲಿಂಗವನ್ನು ನಿರ್ಧರಿಸುವ ಕ್ರೊಮೊಸೋಮ್‌ಗಳ ಒಟ್ಟುಗೂಡುವಿಕೆ (ಕಾಂಬಿನೇಶನ್) ಸೀಲ್ ಆಗಿರುತ್ತಿದೆ. ಹೀಗೆ ಬೀಗ ಮುದ್ರೆ ಹಾಕಲಾದ ಕಾಂಬಿನೇಶನನ್ನು ಯಾವ ರೀತಿಯಲ್ಲೂ, ಯಾವ ಔಷಧಿಯಿಂದಲೂ ಬದಲಾಯಿಸಲು ಸಾಧ್ಯವಿಲ್ಲ.
ಕೃಪೆ: thewire.in

Writer - ನವೋದಿತ ಜೈನ್

contributor

Editor - ನವೋದಿತ ಜೈನ್

contributor

Similar News

ಜಗದಗಲ
ಜಗ ದಗಲ