ಅತಿಥಿ ಬೋಧಕರಿಂದ ಲೈಂಗಿಕ ಶೋಷಣೆ: ರಾಷ್ಟ್ರೀಯ ಡ್ರಾಮಾ ಶಾಲೆಯ ವಿದ್ಯಾರ್ಥಿನಿಯ ಆರೋಪ
Update: 2018-08-04 19:51 IST
ಹೊಸದಿಲ್ಲಿ, ಆ.4: ಅತಿಥಿ ಬೋಧಕರು ತನ್ನನ್ನು ಲೈಂಗಿಕ ಶೋಷಣೆಗೊಳಪಡಿಸಿದ್ದಾರೆ ಎಂದು ರಾಷ್ಟ್ರೀಯ ಡ್ರಾಮಾ ಶಾಲೆಯ ವಿದ್ಯಾರ್ಥಿನಿ ಆರೋಪಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆಗಸ್ಟ್ ಒಂದರಂದು ನೀಡಿರುವ ದೂರಿನಲ್ಲಿ ವಿದ್ಯಾರ್ಥಿನಿ, ಶಾಲೆಯಲ್ಲಿ ಪರೀಕ್ಷೆಯಲ್ಲಿ ನಡೆಸಲು ಆಗಮಿಸಿದ್ದ ಶಿಕ್ಷಕರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ದೂರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪರೀಕ್ಷೆಯ ಭಾಗವಾಗಿ ದೂರುದಾರ ವಿದ್ಯಾರ್ಥಿನಿಯಲ್ಲಿ ಒಂದು ದೃಶ್ಯವನ್ನು ಮಾಡಿ ತೋರಿಸುವಂತೆ ಶಿಕ್ಷಕರು ಸೂಚಿಸಿದ್ದರು ಮತ್ತು ಈ ವೇಳೆ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 62ರ ಹರೆಯದ ಅತಿಥಿ ಶಿಕ್ಷಕರ ವಿರುದ್ಧ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ