ಅರುಣಾಚಲ ಪ್ರದೇಶ ಭಾರತದ ರಾಜ್ಯ ಎಂದ ಚೀನಾ ವೆಬ್‌ಸೈಟ್!

Update: 2018-08-06 17:38 GMT

ಬೀಜಿಂಗ್, ಆ. 6: ಅರುಣಾಚಲಪ್ರದೇಶವು ಭಾರತದ ಒಂದು ರಾಜ್ಯವಾಗಿದೆ ಎಂದು ಹೇಳುವ ಲೇಖನವೊಂದನ್ನು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ನಿಯಂತ್ರಣದ ಪ್ರಮುಖ ಸುದ್ದಿ ವೆಬ್‌ಸೈಟೊಂದು ಪ್ರಕಟಿಸಿ ಅಚ್ಚರಿ ಹುಟ್ಟಿಸಿದೆ.

ಯಾಕೆಂದರೆ, ಅರುಣಾಚಲಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವಾಗಿದೆ ಎನ್ನುವುದು ಚೀನಾದ ಅಧಿಕೃತ ನಿಲುವು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಬಳಿಕ ಈ ಲೇಖನವನ್ನು ಸಿಪಿಸಿಯ ಮುಖವಾಣಿ ‘ಪೀಪಲ್ಸ್ ಡೇಲಿ’ ಪತ್ರಿಕೆಯ ಇಂಗ್ಲಿಷ್ ವೆಬ್‌ಸೈಟ್ ತೆಗೆದುಹಾಕಿದೆ.

ಈ ಲೇಖನವನ್ನು ಚೀನಾ ಸರಕಾರದ ಫೆಲೋಶಿಪ್‌ನಲ್ಲಿ ಬೀಜಿಂಗ್‌ಗೆ ಪ್ರವಾಸ ಹೊರಟಿರುವ ಭಾರತೀಯ ಪತ್ರಕರ್ತರೊಬ್ಬರು ಬರೆದಿದ್ದಾರೆ. ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ, ಅರುಣಾಚಲಪ್ರದೇಶದಲ್ಲಿ ವೃದ್ಧರ ಪ್ರಮಾಣ ಕಡಿಮೆಯಾಗಿದೆ ಎನ್ನುವುದು ಲೇಖನದ ವಿಷಯವಾಗಿದೆ.

ಆಗಸ್ಟ್ 3ರಂದು ಲೇಖನವನ್ನು ಹಾಕಲಾಗಿತ್ತು. ಆದರೆ ಒಂದು ದಿನ ಪೂರ್ಣಗೊಳ್ಳುವ ಮೊದಲೇ ಲೇಖನವನ್ನು ತೆಗೆದುಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News