ರಾಜ್ಯಸಭೆ ಸಭಾಪತಿ ಸ್ಥಾನದ ಪ್ರತಿಪಕ್ಷದ ಅಭ್ಯರ್ಥಿ ವಂದನಾ ಚವನ್
Update: 2018-08-07 23:06 IST
ಹೊಸದಿಲ್ಲಿ, ಆ. 7: ರಾಜ್ಯ ಸಭೆಯ ಉಪ ಸಭಾಪತಿ ಅಭ್ಯರ್ಥಿಯಾಗಿ ಪ್ರತಿಪಕ್ಷಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸದಸ್ಯೆ 57 ವರ್ಷದ ವಂದನಾ ಚವನ್ ಅವರನ್ನು ಆಯ್ಕೆ ಮಾಡಿದೆ. ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಲಿರುವುದರಿಂದ ಎನ್‌ಡಿಎ ಹಾಗೂ ಪ್ರತಿಪಕ್ಷದ ಪಾಳಯದಲ್ಲಿ ಇಂದು ಬೆಳಗ್ಗಿನಿಂದ ನಿರಂತರ ಸಭೆಗಳು ನಡೆದವು.
ಎನ್‌ಡಿಎ ಜೆಡಿಯುನ ಹರಿವಂಶ ನಾರಾಯಣ ಸಿಂಗ್ ಅವರನ್ನು ಉಪ ಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.