ಹೈಪರ್‌ಸೋನಿಕ್ ವಿಮಾನದ ಪ್ರಾಯೋಗಿಕ ಪರೀಕ್ಷೆ: ಚೀನಾ

Update: 2018-08-07 17:38 GMT

ಬೀಜಿಂಗ್, ಆ. 7: ಪರಮಾಣು ಬಾಂಬ್‌ಗಳನ್ನು ಹೊತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಬಲ್ಲ ಹೈಪರ್‌ಸೋನಿಕ್ ವಿಮಾನವೊಂದರ ಪ್ರಾಯೋಗಿಕ ಪರೀಕ್ಷೆ ನಡೆಸಿರುವುದಾಗಿ ಚೀನಾ ಸೋಮವಾರ ಹೇಳಿದೆ.

‘ಸ್ಟಾರಿ ಸ್ಕೈ-2’ ವಿಮಾನದ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ವಾಯುವ್ಯ ಚೀನಾದ ದೂರದ ಪ್ರದೇಶವೊಂದರಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಚೀನಾ ಅಕಾಡಮಿ ಆಫ್ ಏರೋಸ್ಪೇಸ್ ಏರೋಡೈನಾಮಿಕ್ಸ್ ಹೇಳಿರುವುದಾಗಿ ಚೀನಾದ ಸರಕಾರಿ ಸುದ್ದಿ ಸಂಸ್ಥೆ ‘ಕ್ಸಿನುವಾ’ ವರದಿ ಮಾಡಿದೆ.

ವೈಮಾನಿಕ ಕ್ಷೇತ್ರದಲ್ಲಿ ಚೀನಾ ಈಗಾಗಲೇ ತಾಂತ್ರಿಕ ಮುನ್ನಡೆ ಗಳಿಸಿದೆ ಎಂದು ಅದು ಹೇಳಿದೆ.

ಹೈಪರ್‌ಸೋನಿಕ್ ವಿಮಾನಗಳು ಶಬ್ದದ ವೇಗಕ್ಕಿಂತ ಕನಿಷ್ಠ 5 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ.

‘ವೇವ್‌ರೈಡರ್’ ಎಂಬುದಾಗಿಯೂ ಕರೆಯಲ್ಪಡುವ ಈ ವಿಮಾನವು ಗಂಟೆಗೆ 7,344 ಕಿ.ಮೀ. ವೇಗವನ್ನು ಸಾಧಿಸಿದೆ ಎಂದು ಕ್ಸಿನುವಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News