ಪೌರತ್ವ ನಿಷೇಧದ ಭೀತಿಯಲ್ಲಿ ಒಂದು ಗ್ರಾಮ: ಇಲ್ಲಿನ ಶೇ. 60 ಜನರು ಪೌರತ್ವ ಪಟ್ಟಿಯಲ್ಲಿಲ್ಲ

Update: 2018-08-07 17:53 GMT

ಗುವಾಹಟಿ, ಆ.7: ಪೌರತ್ವ ಸಾಬೀತುಪಡಿಸುವ ಕಾನೂನಿನ ಪ್ರಕಾರ ಎಲ್ಲ ದಾಖಲೆಗಳನ್ನು ಸಲ್ಲಿಸಿಯೂ ಪೌರತ್ವ ದಾಖಲೆಯ ಅಂತಿಮ ಕರಡು ಪಟ್ಟಿಯಿಂದ ಅಸ್ಸಾಂನ ಧರಾಂಗ್ ಜಿಲ್ಲೆಯ ಫೂಹುರಾತ್ತಲಿಯ ಶೇ. 60ರಷ್ಟು ಮಂದಿಯನ್ನು ಹೊರಗಿಡಲಾಗಿದೆ.

ಗುವಾಹಟಿಯಿಂದ 70 ಕಿಲೊಮೀಟರ್ ದೂರದ ಬ್ರಹ್ಮಪುತ್ರ ನದಿಯ ಸಮೀಪದ ಗ್ರಾಮವಿದು. ಇಲ್ಲಿ ಎರಡು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಎಲ್ಲರೂ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಮರು ಆಗಿದ್ದಾರೆ. ಇವರಲ್ಲಿ ಶೇ.60ರಷ್ಟು ಮಂದಿಯ ಹೆಸರು ಪೌರತ್ವ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಪೌರತ್ವ ಸಾಬೀತುಪಡಿಸುವ ಎಲ್ಲ ದಾಖಲೆಗಳನ್ನು ಸಲ್ಲಿಸಿಯೂ ತಮ್ಮನ್ನು ಎನ್‍ಆರ್‍ಸಿ ಅಂತಿಮ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಇವರು ಪ್ರಶ್ನಿಸುತ್ತಿದ್ದಾರೆ.

"ಅವರು ನಮ್ಮನ್ನು ಬಾಂಗ್ಲಾದೇಶಿ ಎಂದು ಕರೆಯುತ್ತಿದ್ದಾರೆ. ಆದರೆ ಕಳೆದ 50 ವರ್ಷಗಳಿಗೂ ಹೆಚ್ಚು ಕಾಲದಿಂದ ನಾವಿಲ್ಲಿಯೆ ಬದುಕುತ್ತಿದ್ದೇವೆ. ಹೊಸ ಜನರಿರಬಹುದು. ಅವರು ಹತ್ತಿರದ ಜಿಲ್ಲೆಯಿಂದ ಬಂದವರು. ಬ್ರಹ್ಮಪುತ್ರ ನದಿಯಲ್ಲಿ ನೆರೆ ಬಂದಾಗ ಬೇರೆ ಜಿಲ್ಲೆಗೆ ವಾಸ್ತವ್ಯ ಬದಲಾಯಿಸಿದವರು"
ದಾಖಲೆಗಳಿಲ್ಲದೆ ಒಬ್ಬರೂ ಇಲ್ಲಿಲ್ಲ. ಹುಟ್ಟಿದ ಮಣ್ಣಲ್ಲಿ ನಿರಾಶ್ರಿತರಾಗುವುದನ್ನು ಊಹಿಸಲು ಸಾಧ್ಯವಾಗುವುದಿಲ್ಲ ಎಂದು ಇವರು ಪರಿತಪಿಸುತ್ತಿದ್ದಾರೆ" ಒಬ್ಬನೇ ಒಬ್ಬ ವಿದೇಶಿ ವ್ಯಕ್ತಿ ನಮ್ಮ ನಡುವೆ ಇಲ್ಲ. ನಮ್ಮಲೆಲ್ಲರಿಗೂ ದಾಖಲೆ ಇದೆ. ಎಷ್ಟು ಬಾರಿ ನಾವು ಹಿಯರಿಂಗ್‍ಗೆ ಹಾಜರಾದೆವು. ಪುರಾವೆಯಾಗಿ ಒಂದಕ್ಕೂ ಹೆಚ್ಚು ದಾಖಲೆಗಳನ್ನು ನೀಡಿದೆವು. ಹಾಗಿದ್ದೂ ಪೌರತ್ವ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ" ಎಂದು ಇವರು ಹೇಳುತ್ತಾರೆ.

ಫುಹುರಾತ್ತಲಿ ಇರುವ ಧರಾಂಗ್ ಜಿಲ್ಲೆಯಲ್ಲಿ ಆರು ಲಕ್ಷ ಮುಸ್ಲಿಮರು ವಾಸಿಸುತ್ತಿದ್ದಾರೆ. ಇವರಲ್ಲಿ ಶೇ.33ರಷ್ಟು ಮಂದಿ ಅಂತಿಮ ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News