ಘಝ್ನಿ ನಗರಕ್ಕೆ ತಾಲಿಬಾನ್ ಮುತ್ತಿಗೆ: ಅಮೆರಿಕ ಪಡೆಗಳಿಂದ ವಾಯು ದಾಳಿ
Update: 2018-08-10 23:15 IST
ಘಝ್ನಿ (ಅಫ್ಘಾನಿಸ್ತಾನ), ಆ. 10: ಅಫ್ಘಾನಿಸ್ತಾನದಲ್ಲಿ ಘಝ್ನಿ ನಗರವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ಭಯೋತ್ಪಾದಕರು ಶುಕ್ರವಾರ ಬೃಹತ್ ದಾಳಿಯೊಂದನ್ನು ನಡೆಸಿದ್ದಾರೆ.
ಅದೇ ವೇಳೆ, ದಾಳಿಯನ್ನು ವಿಫಲಗೊಳಿಸಲು ಅಮೆರಿಕ ಪಡೆಗಳು ವಾಯುದಾಳಿಗಳನ್ನು ನಡೆಸಿವೆ.
ಸ್ಫೋಟಗಳು ಮತ್ತು ಗುಂಡಿನ ಮೊರೆತಗಳ ನಡುವೆ ನಾಗರಿಕರು ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ಮನೆಯಲ್ಲಿ ಅಡಗಿಕೊಂಡಿದ್ದಾರೆ.
ಭಯೋತ್ಪಾದಕರ ವಿರುದ್ಧ ಹೋರಾಡಲು ಅಫ್ಘಾನ್ ವಿಶೇಷ ಪಡೆಗಳನ್ನೂ ನಿಯೋಜಿಸಲಾಗಿದೆ.
ಘರ್ಷಣೆಯಲ್ಲಿ ಕನಿಷ್ಠ ಓರ್ವ ಅಫ್ಘಾನ್ ಸೈನಿಕ ಮೃತಪಟ್ಟಿದ್ದಾರೆ ಹಾಗೂ 7 ಮಂದಿ ಗಾಯಗೊಂಡಿದ್ದಾರೆ.