ಪರಮಾಣು ನಿಶ್ಶಸ್ತ್ರೀಕರಣ ಕ್ರಮಗಳಿಗೆ ತಣ್ಣೀರೆರಚುತ್ತಿರುವ ಅಮೆರಿಕ: ಉತ್ತರ ಕೊರಿಯ ಆರೋಪ

Update: 2018-08-10 17:54 GMT

ಸಿಯೋಲ್, ಆ. 10: ಅಮೆರಿಕವು ವಿಶ್ವಾಸವಿಲ್ಲದವರಂತೆ ವರ್ತಿಸುತ್ತಿದೆ ಹಾಗೂ ಉತ್ತರ ಕೊರಿಯದ ವಿರುದ್ಧ ಅದು ಹೇರಿರುವ ಪೂರ್ಣ ಪ್ರಮಾಣದ ಆರ್ಥಿಕ ದಿಗ್ಬಂಧನದ ಒತ್ತಡವು ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತದೆ ಎಂದು ಉತ್ತರ ಕೊರಿಯ ಗುರುವಾರ ಹೇಳಿದೆ.

 ಸಿಂಗಾಪುರದಲ್ಲಿ ಜೂನ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ಶೃಂಗ ಸಮ್ಮೇಳನದಲ್ಲಿ, ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವ ನಿಟ್ಟಿನಲ್ಲಿ ಅಸ್ಪಷ್ಟ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಆ ಒಪ್ಪಂದವು ಉತ್ತರ ಕೊರಿಯ ತನ್ನ ಪರಮಾಣು ಶಸ್ತ್ರಗಳನ್ನು ಸಮಗ್ರವಾಗಿ, ಪರೀಕ್ಷಿಸಬಹುದಾದ ರೀತಿಯಲ್ಲಿ ಹಾಗೂ ಇನ್ನೆಂದೂ ಪರಮಾಣು ಶಸ್ತ್ರಗಳನ್ನು ತಯಾರು ಮಾಡಲು ಆಗದ ರೀತಿಯಲ್ಲಿ ನಾಶಪಡಿಸಬೇಕು ಎಂಬ ಅಮೆರಿಕದ ದೀರ್ಘಕಾಲೀನ ಬೇಡಿಕೆಯಿಂದ ಅತಿ ದೂರದಲ್ಲಿದೆ.

 ಅಮೆರಿಕವು ತನ್ನ ಮಾತುಕತೆಯ ಭಾಗೀದಾರನನ್ನು ಅವಮಾನಪಡಿಸುತ್ತಿದೆ ಹಾಗೂ ನಮ್ಮ ಪರಮಾಣು ನಿಶ್ಶಸ್ತ್ರೀಕರಣದ ಪ್ರಾಮಾಣಿಕ ಪ್ರಯತ್ನಗಳಿಗೆ ತಣ್ಣೀರೆರಚುತ್ತಿದೆ ಎಂದು ಉತ್ತರ ಕೊರಿಯದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News