ಇಂಡೋನೇಶ್ಯಾದಲ್ಲಿ ವಿಮಾನ ಪತನ: 8 ಮಂದಿ ಮೃತ್ಯು

Update: 2018-08-12 17:28 GMT

ಇಂಡೋನೇಶ್ಯಾ, ಆ.12: ಪರ್ವತಶ್ರೇಣಿಯೊಂದರ ಸಮೀಪ ವಿಮಾನವೊಂದು ಪತನಗೊಂಡಿದ್ದು, 8 ಮಂದಿ ಮೃತಪಟ್ಟಿರುವ ಘಟನೆ ಇಂಡೋನೇಶ್ಯಾದಲ್ಲಿ ನಡೆದಿದೆ. ಈ ದುರಂತದಲ್ಲಿ 12 ವರ್ಷದ ಬಾಲಕನೊಬ್ಬ ಬದುಕುಳಿದಿದ್ದಾನೆ.

ಪಪುವಾ ನ್ಯೂ ಜೆನಿವಾ ಗಡಿ ಸಮೀಪದಲ್ಲಿ ಈ ದುರಂತ ಸಂಭವಿಸಿದೆ. ಸ್ವಿಸ್ ಮೂಲದ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿತ್ತು. ಇಲ್ಲಿನ ತನಾಹ್ ಮೆರಾಹ್ ದಿಂದ ವಿಮಾನ ಹೊರಟಿತ್ತು. ಇಬ್ಬರು ಸಿಬ್ಬಂದಿ ಸೇರಿ 9 ಮಂದಿ ವಿಮಾನದಲ್ಲಿದ್ದರು.

ಘಟನೆಯಲ್ಲಿ ಜುಮೈದಿ ಎಂಬ ಹನ್ನೆರಡರ ಹರೆಯದ ಬಾಲಕ ಮಾತ್ರ ಬದುಕುಳಿದಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು ಅಪಘಾತದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ದುರಂತಕ್ಕೀಡಾದ ವಿಮಾನದಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಪ್ರಯಾಣಿಸುತ್ತಿದ್ದರು. ಒಸ್ಕಿಬಿಲ್ ಸಮೀಪಿಸುತ್ತಿದ್ದಂತೆ ವಿಮಾನವು ಟವರ್‌ನಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರ್ವತಗಳು ಮತ್ತು ಕಾಡಿನಿಂದ ಸುತ್ತುವರಿದಿರುವ ಪಪುವ ಮತ್ತು ಪಶ್ಚಿಮ ಪಪುವದ ಮಧ್ಯೆ ಸಾರಿಗೆ ವ್ಯವಸ್ಥೆಯಾಗಿ ವಿಮಾನವನ್ನೇ ನೆಚ್ಚಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇತರ ಕಾರಣಗಳಿಂದ ವಿಮಾನಪಘಾತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News