ಪಾಕ್‌ನಿಂದ ಆಕ್ರಮಿತ ಕಾಶ್ಮೀರದ ಜನರ ವಿರುದ್ಧ ಜಲಯುದ್ಧ

Update: 2018-08-12 17:31 GMT

ಮುಝಫ್ಫರಬಾದ್, ಆ.12: ನೀಲಮ್ ನದಿಯ ನೀರನ್ನು ಪಂಜಾಬ್ ಪ್ರಾಂತ್ಯಕ್ಕೆ ತಿರುಗಿಸುವ ಮೂಲಕ ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರದ ಜನತೆಯ ವಿರುದ್ಧ ಜಲಯುದ್ಧವನ್ನು ಸಾರಿರುವುದಕ್ಕೆ ವಿಡಿಯೊ ಸಾಕ್ಷಿ ಲಭ್ಯವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ನೀಲಮ್ ನದಿಯ ನೀರನ್ನು ಪಂಜಾಬ್‌ಗೆ ತಿರುಗಿಸುವ ಮೂಲಕ ಪಾಕಿಸ್ತಾನ ಮುಝಫ್ಫರಬಾದ್‌ನ ಜನರಿಗೆ ನೀರನ್ನು ನೀಡದೆ ವಂಚಿಸುತ್ತಿದೆ. ನದಿಯನ್ನು ತಿರುಗಿಸಿದ ಪರಿಣಾಮವಾಗಿ ಮಾನ್ಸೂನ್ ತಿಂಗಳಲ್ಲೂ ನದಿ ಬತ್ತಿಹೋಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪಾಕಿಸ್ತಾನದ ಈ ನಡೆಯ ವಿರುದ್ಧ ಮುಝಫ್ಫರಬಾದ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಜನರ ಮೂಲಭೂತ ಅಗತ್ಯವಾದ ನೀರನ್ನು ನೋಡುವಂತೆ ಜನರು ಸರಕಾರವನ್ನು ಆಗ್ರಹಿಸಿದ್ದಾರೆ.

ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ನಮಗೆ ಸಿಗುತ್ತಿರುವ ನೀರು ಕೊಳಚೆ ನೀರಾಗಿದೆ. ಶುದ್ಧ ನೀರನ್ನು ಪಂಜಾಬ್ ಪ್ರಾಂತ್ಯಕ್ಕೆ ಹರಿಯಬಿಡಲಾಗುತ್ತಿದೆ. ನಾವು ವಿದ್ಯುತ್ ಇಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಏರುತ್ತಿರುವ ಉಷ್ಣಾಂಶದಿಂದ ಸೆಕೆಯೂ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News