ಕಾಬೂಲ್ ವಶಕ್ಕೆ ತಾಲಿಬಾನ್ ಯತ್ನ: 26 ಬಲಿ

Update: 2018-08-12 17:39 GMT

ಕಾಬೂಲ್, ಆ.12: ಮಧ್ಯ ಅಫ್ಘಾನಿಸ್ತಾನದ ಘಝ್ನಿ ನಗರವನ್ನು ಪ್ರವೇಶಿಸಿರುವ ತಾಲಿಬಾನ್ ಉಗ್ರರು ಮತ್ತು ಸ್ಥಳೀಯ ಪಡೆಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಓರ್ವ ಪತ್ರಕರ್ತ ಹಾಗೂ ಇಪ್ಪತ್ತೈದು ಮಂದಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರು ನಗರದ ದೂರಸಂಪರ್ಕ ಸಾಧನಗಳನ್ನು ನಾಶಗೊಳಿಸಿದ ಕಾರಣ ಜನರು ಸಹಾಯ ಯಾಚಿಸಲು ಪರದಾಡುವಂತಾಗಿತ್ತು. ಅಧಿಕಾರಿಗಳು ಕೂಡಾ ಮಾಹಿತಿ ಪಡೆಯಲು ಹರಸಾಹಸಪಡಬೇಕಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾಬೂಲ್ ನಗರವನ್ನು ಅಫ್ಘಾನಿಸ್ತಾನದ ದಕ್ಷಿಣ ಭಾಗದ ಜೊತೆ ಸಂಪರ್ಕಿಸುವ ಹೆದ್ದಾರಿ ಘಝ್ನಿ ನಗರವನ್ನು ಹಾದು ಹೋಗುವ ಕಾರಣ ಈ ನಗರದ ಮೇಲೆ ಹಿಡಿತ ಸಾಧಿಸುವುದು ತಾಲಿಬಾನ್ ಹಾಗೂ ಸರಕಾರಿ ಪಡೆಗಳಿಗೆ ಅತ್ಯಗತ್ಯವಾಗಿದೆ. ಅಫ್ಘಾನ್ ರಕ್ಷಣಾ ಸಚಿವರು, ಘಝ್ನಿ ಸಂಪೂರ್ಣವಾಗಿ ಸರಕಾರದ ಹಿಡಿತದಲ್ಲಿದೆ ಎಂದು ಹೇಳಿಕೆ ನೀಡಿದ್ದರೆ, ಜಗರದ ಹಲವು ಪ್ರಮುಖ ಭಾಗಗಳ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದೆ ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಾಲಿಬಾನ್ ವಕ್ತಾರ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News