ಲೋಕಸಭೆಯ ಹೆಡ್‌ಮಾಸ್ಟರ್ ಸೋಮನಾಥ ಚಟರ್ಜಿ

Update: 2018-08-13 18:38 GMT

 ಬಿಜೆಪಿಯ ಕ್ಷಿಪ್ರ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಸಿಪಿಐ(ಎಂ) ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂಬುದು ಚಟರ್ಜಿ ಹಾಗೂ ಅವರ ನಿಕಟವರ್ತಿ ಕಾಮ್ರೇಡ್ ಸೈಫುದ್ದೀನ್ ಚೌಧುರಿಯವರ ನಿಲುವಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ಬದಲು, ಬಿಜೆಪಿಯನ್ನು ಪ್ರಮುಖ ರಾಜಕೀಯ ಶತ್ರು ಎಂದು ಪರಿಗಣಿಸಬೇಕು ಎಂಬುದು ಇವರ ಅಭಿಪ್ರಾಯವಾಗಿತ್ತು.

 ಲೋಕಸಭೆ ಮಾಜಿ ಸ್ಪೀಕರ್, ಹಿರಿಯ ಕಮ್ಯುನಿಸ್ಟ್ ಮುಖಂಡ ಸೋಮನಾಥ ಚಟರ್ಜಿ(89 ವರ್ಷ) ಸೋಮವಾರ ಕೋಲ್ಕತಾದಲ್ಲಿ ನಿಧನರಾದರು. 2008ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಿಪಿಐಎಂ ಬೆಂಬಲ ಹಿಂಪಡೆದಾಗ ಲೋಕಸಭಾ ಸ್ಪೀಕರ್ ಆಗಿದ್ದ ಚಟರ್ಜಿ ಸ್ಪೀಕರ್ ಹುದ್ದೆ ತ್ಯಜಿಸಲು ನಿರಾಕರಿಸಿದ್ದರು. ಆಗ ಸುಮಾರು 4 ದಶಕಗಳ ಕಾಲದಿಂದ ಸಿಪಿಐಎಂ ಸದಸ್ಯರಾಗಿದ್ದ ಚಟರ್ಜಿಯವನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

10 ಬಾರಿ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಚಟರ್ಜಿ 2004ರಿಂದ 2009ರವರೆಗೆ ಸ್ಪೀಕರ್ ಆಗಿದ್ದರು. 1984ರಲ್ಲಿ ಕೋಲ್ಕತಾದ ಪ್ರತಿಷ್ಠಿತ ಜಾಧವ್‌ಪುರ ಕ್ಷೇತ್ರದಲ್ಲಿ ಹಾಲಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೆದುರು ಸೋತಿರುವುದನ್ನು ಬಿಟ್ಟರೆ ಚಟರ್ಜಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. 1950ರಲ್ಲಿ ಕ್ಯಾಂಬ್ರಿಡ್ಜ್ ವಿವಿಯಲ್ಲಿ ಕಾನೂನು ವ್ಯಾಸಂಗ ನಡೆಸಿದ್ದ ಚಟರ್ಜಿ ಕೆಲ ಸಮಯ ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಉತ್ತಮ ವಾಗ್ಮಿಯಾಗಿದ್ದ ಚಟರ್ಜಿ ಲೋಕಸಭೆಯಲ್ಲಿ ಪಕ್ಷದ ಪರ ಚರ್ಚೆಯ ಮುಂಚೂಣಿಯಲ್ಲಿದ್ದರು.
 1929ರ ಜುಲೈ 25ರಂದು ಅಸ್ಸಾಂನ ತೇಜ್‌ಪುರದಲ್ಲಿ ಜನಿಸಿದ್ದ ಚಟರ್ಜಿಯವರ ತಂದೆ ನಿರ್ಮಲಚಂದ್ರ ಚಟರ್ಜಿ ಕೋಲ್ಕತಾ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು. ನಿರ್ಮಲ ಚಂದ್ರ ಚಟರ್ಜಿ ಅಖಿಲಭಾರತ ಹಿಂದೂ ಮಹಾಸಭಾದ ಜೊತೆ ನಿಕಟ ಸಂಪರ್ಕದಲ್ಲಿದ್ದರೂ ಸೋಮನಾಥ ಚಟರ್ಜಿ ಸೈದ್ಧಾಂತಿಕವಾಗಿ ವಿಭಿನ್ನ ಮಾರ್ಗದಲ್ಲಿ ಮುನ್ನಡೆದಿ್ದು ಗಮನಾರ್ಹವಾಗಿದೆ.
ಸಂಸದೀಯನಾಗಿ ತನ್ನ ನೆನಪುಗಳನ್ನು ಸೋಮನಾಥ ಚಟರ್ಜಿ ‘ಕೀಪಿಂಗ್ ದಿ ಫೈತ್’ ಎಂಬ ಕೃತಿಯಲ್ಲಿ ದಾಖಲಿಸಿದ್ದು ಇದು 2010ರಲ್ಲಿ ಪ್ರಕಟವಾಗಿದೆ. ಬಂಗಾಳದ ಕಮ್ಯುನಿಸ್ಟ್ ಮುಖಂಡರಾದ ಜ್ಯೋತಿ ಬಸು, ಪ್ರಮೋದ್ ದಾಸ್‌ಗುಪ್ತಾ, ಹರಿಕೃಷ್ಣ ಕೋನಾರ್ ಮುಂತಾದವರು ಲೋಕಸಭೆಗೆ ಸೋಮನಾಥ ಚಟರ್ಜಿಯವರು ಸ್ಪರ್ಧಿಸಲು ಅವರ ತಂದೆಯ ಮನವೊಲಿಸಿದರು. 1968ರಲ್ಲಿ ಸಿಪಿಐ(ಎಂ)ಗೆ ಸೇರ್ಪಡೆಗೊಂಡಿದ್ದ ಸೋಮನಾಥ ಚಟರ್ಜಿ ಆ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ 1971ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚೊಚ್ಚಲ ಸ್ಪರ್ಧೆಯಲ್ಲೇ ಸಾಧಿಸಿದ ಈ ಗೆಲುವು ಸಿಪಿಐ(ಎಂ)ನ ಗೆಲುವು ಎಂು ಸೋಮನಾಥ ಚಟರ್ಜಿ ಬರೆದಿದ್ದಾರೆ.
    ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಪಕ್ಷವಾಗಿ ಹಾಗೂ ಚುನಾವಣೆಯಲ್ಲಿ ಸಾಧಿಸಿದ ಮುನ್ನಡೆಯ ಹಿನ್ನೆಲೆಯಲ್ಲಿ ಸಿಪಿಐ(ಎಂ) ಯಾವ ರೀತಿಯ ರಾಜಕೀಯ ಸಂಬಂಧ ಹೊಂದಿರಬೇಕು ಮುಂತಾದ ಕೆಲವೊಂದು ಸೂಕ್ಷ್ಮ ವಿಷಯಗಳಲ್ಲಿ ಚಟರ್ಜಿ ತಮ್ಮ ಪಕ್ಷದ ನಿಲುವನ್ನು ಒಪ್ಪುತ್ತಿರಲಿಲ್ಲ. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಬಳಿಕವಂತೂ ಸಿಪಿಐ(ಎಂ) ಹಾಗೂ ಚಟರ್ಜಿ ನಡುವಿನ ಭಿನ್ನಾಭಿಪ್ರಾು ಸ್ಪಷ್ಟವಾಗಿ ಮುನ್ನೆಲೆಗೆ ಬಂದಿತು.
   ಬಿಜೆಪಿಯ ಕ್ಷಿಪ್ರ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಸಿಪಿಐ(ಎಂ) ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂಬುದು ಚಟರ್ಜಿ ಹಾಗೂ ಅವರ ನಿಕಟವರ್ತಿ ಕಾಮ್ರೇಡ್ ಸೈಫುದ್ದೀನ್ ಚೌಧುರಿಯವರ ನಿಲುವಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ಬದಲು, ಬಿಜೆಪಿಯನ್ನು ಪ್ರಮುಖ ರಾಜಕೀಯ ಶತ್ರು ಎಂದು ಪರಿಗಣಿಸಬೇಕು ಎಂಬುದು ಇವರ ಅಭಿಪ್ರಾಯವಾಗಿತ್ತು. ಆದರೆ ಪಕ್ಷದ ಬಹುತೇಕ ಸದಸ್ಯರು ಎರಡೂ ಪ್ರಮುಖ ರಾಜಕೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕೆಂಬ ಅಭಿಪ್ರಾಯ ಹೊಂದಿದ್ದರು ಮತ್ತು ಈ ಇಬ್ಬರೂ ನಾಯಕರು ಪಕ್ಷದ ಗಡಿ ಮೀರಿ ವರ್ತಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇವರಿಬ್ಬರ ಬಗ್ಗೆ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಚರ್ಚೆ ನಡೆದು ಚೌಧರಿಯವರನ್ನು 2000ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಯಿತು.
ಯುಪಿಎ ಮಿತ್ರಕೂಟದ ಮನಮೋಹನ್ ಸಿಂಗ್ ಸರಕಾರಕ್ಕೆ ಸಿಪಿಐ(ಎಂ) ಬೆಂಬಲ ನೀಡಿತ್ತು. ಆದರೆ ಅಮೆರಿಕದೊಂದಿಗೆ ಕೇಂದ್ರ ಸರಕಾರ ಮಾಡಿಕೊಂಡ ಪರಮಾಣು ಒಪ್ಪಂದವನ್ನು ವಿರೋಧಿಸಿದ್ದ ಸಿಪಿಐ(ಎಂ) ಬೆಂಬಲ ಹಿಂಪಡೆಯಿತು. ಆದರೆ ಆಗ ಲೋಕಸಭೆಯ ಸ್ಪೀಕರ್ ಆಗಿದ್ದ ಚಟರ್ಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಪಕ್ಷದ ಮುಖಂಡ ಪ್ರಕಾಶ್ ಕಾರಟ್ ೂಚನೆಯನ್ನು ಚಟರ್ಜಿ ಧಿಕ್ಕರಿಸಿದರು.
1996ರಲ್ಲಿ ಕೇಂದ್ರದಲ್ಲಿ ತೃತೀಯ ರಂಗದ ಸರಕಾರ ರಚನೆಯಾದಾಗ ಜ್ಯೋತಿ ಬಸುಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಸಿಪಿಐ(ಎಂ) ಕೇಂದ್ರ ಸಮಿತಿಯ ಸೂಚನೆಯಂತೆ ಅವರು ಅವಕಾಶ ನಿರಾಕರಿಸಿದರು. (ಇದೊಂದು ಚಾರಿತ್ರಿಕ ಪ್ರಮಾದವಾಗಿ್ತು ಎಂದು ಬಳಿಕ ಬಸು ಬಣ್ಣಿಸಿದ್ದರು)
ಇದನ್ನು ಉದಾಹರಿಸಿದ್ದ ಚಟರ್ಜಿ, ಸ್ಪೀಕರ್ ಸ್ಥಾನವನ್ನು ತ್ಯಜಿಸಿದರೆ ಪಕ್ಷದ ಪ್ರತಿಷ್ಠೆಗೆ ಮಾತ್ರವಲ್ಲ ಭಾರತೀಯ ಪ್ರಜಾಪ್ರಭುತ್ವದ ವೌಲ್ಯಕ್ಕೇ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದರು. ಕಾರಟ್ ಸೂಚನೆಯನ್ನು ಧಿಕ್ಕರಿಸಿದ್ದ ಚಟರ್ಜಿ, ಸ್ಪೀಕರ್ ಸ್ಥಾನ ಪಕ್ಷಾತೀತವಾಗಿರುವ ಕಾರಣ ಈ ಸ್ಥಾನದ ಘನತೆಯನ್ನು ಕಾಯ್ದುೊಳ್ಳಬೇಕಿದೆ ಎಂದು ಉತ್ತರಿಸಿದ್ದರು.
ಆದರೆ ಈ ವಾದವನ್ನು ಒಪ್ಪಲು ನಿರಾಕರಿಸಿದ್ದ ಪಕ್ಷ, ಚಟರ್ಜಿಯವರನ್ನು ಉಚ್ಚಾಟಿಸಿತ್ತು. ಇದು ತನ್ನ ಬದುಕಿನ ಅತ್ಯಂತ ವಿಷಾದನೀಯ ದಿನವಾಗಿದೆ ಎಂದು ಇದನ್ನು ಚಟರ್ಜಿ ಬಣ್ಣಿಸಿದ್ದರು. ತನಗೆ ಇಂತಹ ಕಠಿಣ ಶಿಕ್ಷೆ ವಿಧಿಸಿದ್ದ ಪಕ್ಷದ ಮುಖಂಡರನ್ನು ಟೀಕಿಸಿದ್ದ ಚಟರ್ಜಿ, ತನ್ನ ಸಲಹೆಗಾರ ಜ್ಯೋತಿ ಬಸು ಅವರ ಸಲಹೆ ಮೇರೆಗೆ ತಾನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಯದಿರಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದರು.
ಚಟರ್ಜಿ ಅವರ ನಿಧನವು ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಮ್ಯುನಿಸ್ಟ್ ಇತಿಹಾಸದ ಯುಗಾಂತ್ಯವಾಗುವ ಸಂಕೇತವಾಗಿದೆ ಎನ್ನಬಹುದು.
ಕೃಪೆ: thewire 

Writer - ಮೊನೊಬಿನಾ ಗುಪ್ತ

contributor

Editor - ಮೊನೊಬಿನಾ ಗುಪ್ತ

contributor

Similar News

ಜಗದಗಲ
ಜಗ ದಗಲ