ಇಂದು ಸಂಜೆ ಮಹಾದಾಯಿ ನ್ಯಾಯಾಧಿಕರಣದ ಅಂತಿಮ ಐ-ತೀರ್ಪು ಪ್ರಕಟ ಸಾಧ್ಯತೆ

Update: 2018-08-14 07:59 GMT

ಹೊಸದಿಲ್ಲಿ, ಆ.14: ಮೂರು ರಾಜ್ಯಗಳಿಗೆ ನದಿ ನೀರು ಹಂಚಲಿರುವ ಮಹಾದಾಯಿ ನ್ಯಾಯಾಧಿಕರಣದ ಅಂತಿಮ ತೀರ್ಪು ಇಂದು ಸಂಜೆ 4 ಗಂಟೆಗೆ ಹೊರಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

 ನ್ಯಾಯಾಧಿಕರಣವು ಕೇಂದ್ರದ ಜಲ ಸಂಪನ್ಮೂಲ ಸಚಿವಾಲಯಕ್ಕೆ ತೀರ್ಪಿನ ಪ್ರತಿಯನ್ನು ಕಳುಹಿಸಿಕೊಟ್ಟಿದೆ. ನ್ಯಾಯಾಧಿಕರಣ ಮೂರು ರಾಜ್ಯಗಳಿಗೆ ನೀರು ಹಂಚಲಿದೆ.

 ಕರ್ನಾಟಕದ ಪಾಲಿಗೆ ಎಷ್ಟು ನೀರು ಸಿಗಲಿದೆ ಎಂಬ ವಿಚಾರ ಕುತೂಹಲ ಕೆರಳಿಸಿದೆ. ಕರ್ನಾಟಕ ಕುಡಿಯುವ ನೀರಿಗಾಗಿ ನ್ಯಾಯಸಮ್ಮತವಾಗಿ ಸಲ್ಲಬೇಕಾದ 30 ಟಿಎಂಸಿ ನೀರಿನ ಪ್ರಮಾಣದ ನಿರೀಕ್ಷೆಯಲ್ಲಿದೆ.

ಮಹಾದಾಯಿ ನ್ಯಾಯಾಧಿಕರಣದ ತೀರ್ಪು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ, 4 ಜಿಲ್ಲೆಗಳ ಹಾಗೂ 11 ತಾಲೂಕುಗಳ ಭವಿಷ್ಯ ನಿರ್ಧಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News