ಅಮೆರಿಕ: ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿರುವ 14ರ ಬಾಲಕ

Update: 2018-08-14 17:15 GMT

ನ್ಯೂಯಾರ್ಕ್, ಆ. 14: ಅಮೆರಿಕದ 14 ವರ್ಷದ ಶಾಲಾ ಬಾಲಕನೊಬ್ಬ ವರ್ಮಂಟ್ ರಾಜ್ಯದ ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾನೆ.

ಈ ರಾಜ್ಯದ ಸಂವಿಧಾನದಲ್ಲಿ ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಯಾವುದೇ ಪ್ರಾಯ ಮಿತಿಯಿಲ್ಲ. ಅದನ್ನು ಬಳಸಿಕೊಂಡಿರುವ ಇತಾನ್ ಸಾನ್‌ಬಾರ್ನ್ ನೇರವಾಗಿ ಚುನಾವಣಾ ರಂಗಕ್ಕೆ ಇಳಿದಿದ್ದಾನೆ.

ಈ ರಾಜ್ಯದಲ್ಲಿ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಲ್ಲಿ 4 ವರ್ಷಗಳ ಕಾಲ ವಾಸವಿದ್ದರೆ ಸಾಕಾಗುತ್ತದೆ.

ಇತಾನ್ 14 ವರ್ಷಗಳಿಂದಲೂ ಈ ರಾಜ್ಯದಲ್ಲಿ ವಾಸಿಸುತ್ತಿದ್ದಾನೆ. ಮಂಗಳವಾರ ನಡೆಯುವ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಈ ಬಾಲಕನು ಹಲವಾರು ವಯಸ್ಕ ಸ್ಪರ್ಧಿಗಳನ್ನು ಎದುರಿಸುತ್ತಿದ್ದಾನೆ.

ಈ ನಡುವೆ, ಅಪ್ರಾಪ್ತ ವಯಸ್ಕರಿಗೂ ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡುವ ಸಂವಿಧಾನದ ಲೋಪವನ್ನು ಸರಿಪಡಿಸುವಂತೆ ವರ್ಮಂಟ್ ಶಾಸಕರನ್ನು ಜನರು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News