ದೋಣಿ ಮುಳುಗಿ 22 ವಿದ್ಯಾರ್ಥಿಗಳ ಸಾವು

Update: 2018-08-15 17:09 GMT

ಖಾರ್ಟೂಮ್ (ಸುಡಾನ್), ಆ. 15: ಉತ್ತರ ಸುಡಾನ್‌ನಲ್ಲಿ 40ಕ್ಕಿಂತಲೂ ಅಧಿಕ ಮಕ್ಕಳನ್ನು ಹೊತ್ತು ನೈಲ್ ನದಿಯನ್ನು ದಾಟುತ್ತಿದ್ದ ದೋಣಿಯೊಂದು ಬುಧವಾರ ಮಗುಚಿದಾಗ ಕನಿಷ್ಠ 22 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸುನ’ ವರದಿ ಮಾಡಿದೆ.

ಮಕ್ಕಳು ಶಾಲೆಗೆ ಹೋಗುತ್ತಿದ್ದರು. ನಾಪತ್ತೆಯಾಗಿರುವ ಮಕ್ಕಳಿಗಾಗಿ ನಾಗರಿಕ ರಕ್ಷಣಾ ಪಡೆಗಳು ನದಿಯಲ್ಲಿ ಶೋಧ ನಡೆಸುತ್ತಿವೆ. ಆದರೆ ಯಾವುದೇ ದೇಹಗಳು ಸಿಕ್ಕಿಲ್ಲ.

ತಾಂತ್ರಿಕ ವೈಫಲ್ಯದಿಂದಾಗಿ ದೋಣಿ ಮುಳುಗಿತು ಎಂದು ‘ಸುನ’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News