×
Ad

ಇಟಲಿ: ಫ್ಲೈಓವರ್ ಕುಸಿತ; ಮೃತರ ಸಂಖ್ಯೆ 37ಕ್ಕೆ

Update: 2018-08-15 22:41 IST

ಜೆನೋವ (ಇಟಲಿ), ಆ. 15: ಇಟಲಿಯ ಜೆನೋವ ನಗರದಲ್ಲಿ ಮಂಗಳವಾರ ಕುಸಿದ ಫ್ಲೈಓವರ್‌ನಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 37ಕ್ಕೇರಿದೆ.

ರಕ್ಷಣಾ ಸಿಬ್ಬಂದಿ ಬುಧವಾರವೂ ಮೇಲ್ಸೇತುವೆಯ ಅವಶೇಷಗಳನ್ನು ಜಾಲಾಡಿದರು.

ಬಂದರು ನಗರ ಜೆನೋವವನ್ನು ದಕ್ಷಿಣ ಫ್ರಾನ್ಸ್‌ಗೆ ಜೋಡಿಸುವ ರಸ್ತೆಯ ಭಾಗವಾಗಿರುವ ಈ ಮೇಲ್ಸೇತುವೆಯನ್ನು 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.

ಮಂಗಳವಾರ ಸುರಿದ ಭಾರೀ ಮಳೆಗೆ ಅದು ಕುಸಿಯಿತು. ಡಝನ್‌ಗಟ್ಟಳೆ ವಾಹನಗಳು ಕೆಳಗೆ ಬಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News